ವೈಭವ್ ಸೂರ್ಯವಂಶಿಯ ಅಮೋಘ ಶತಕ – ಭಾರತ U19 ತಂಡಕ್ಕೆ 55 ರನ್‌ಗಳ ಜಯ

ವೈಭವ್ ಸೂರ್ಯವಂಶಿಯ ಅಮೋಘ ಶತಕ – ಭಾರತ U19 ತಂಡಕ್ಕೆ 55 ರನ್‌ಗಳ ಜಯ

ಭಾರತದ ಯುವ ತಂಡವು ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 4 ನೇ ಯೂತ್ ಅಂಡರ್ 19 ಏಕದಿನ ಪಂದ್ಯದಲ್ಲಿ 55 ರನ್‌ಗಳ ಭರ್ಜರಿ ಜಯವನ್ನು ದಾಖಲಾಗಿದೆ. ವುಸ್ಟರ್‌ನ ನ್ಯೂ ರೋಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ವೇಗದ ಶತಕ ಹಾಗೂ ವಿಹಾನ್ ಮಲ್ಹೋತ್ರಾ ಶತಕದ ಪ್ರದರ್ಶನ ಭಾರತದ ಗೆಲುವಿಗೆ ಪೂರಕವಾಯಿತು.

ಟಾಸ್ ಗೆದ್ದ ಇಂಗ್ಲೆಂಡ್‌ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಆಘಾತದ ನಂತರ, ವೈಭವ್ ಸೂರ್ಯವಂಶಿ (143 ರನ್, 78 ಎಸೆತಗಳಲ್ಲಿ) ಹಾಗೂ ವಿಹಾನ್ ಮಲ್ಹೋತ್ರಾ (129 ರನ್, 121 ಎಸೆತಗಳಲ್ಲಿ) ಭರ್ಜರಿ ಶತಕಗಳ ಮೂಲಕ ಇಂಗ್ಲೆಂಡ್ ಬೌಲರ್‌ಗಳನ್ನು ಒತ್ತಡಕ್ಕೆ ತಂದುಬಿಟ್ಟರು. ಇವರು ಎರಡನೇ ವಿಕೆಟ್‌ಗೆ 219 ರನ್‌ಗಳ ದೊಡ್ಡ ಜೊತೆಯಾಟ ದಾಖಲಿಸಿದರು. ಭಾರತ 50 ಓವರ್‌ಗಳಲ್ಲಿ 363 ರನ್ ಕಲೆಹಾಕಿತು.

ಇಂಗ್ಲೆಂಡ್ ತಂಡ 309 ರನ್‌ಗಳ ಗುರಿ ಬೆನ್ನಟ್ಟಿದರೂ, ಆರಂಭಿಕ ಲಯದ ನಂತರ ಮಧ್ಯದ ಕ್ರಮದಲ್ಲಿ ವಿಕೆಟ್‌ಗಳನ್ನು ಸಡಿಲವಾಗಿ ಕಳೆದುಕೊಂಡಿತು. ರಾಕಿ ಫ್ಲಿಂಟಾಫ್ (107) ಮತ್ತು ಬೆನ್ ಡಾಕಿನ್ಸ್ (67) ಉತ್ತಮ ಹೋರಾಟ ತೋರಿದರೂ, ಇತರರ ಸಹಕಾರದ ಕೊರತೆಯಿಂದ ಇಂಗ್ಲೆಂಡ್ ತಂಡವು 45.3 ಓವರ್‌ಗಳಲ್ಲಿ 308 ರನ್‌ಗಳಿಗೆ ಆಲೌಟ್ ಆಯಿತು.

ಭಾರತದ ಬೌಲಿಂಗ್ ವಿಭಾಗದಲ್ಲಿ ನಮನ ಪುಷ್ಪಕ್ 3 ಪ್ರಮುಖ ವಿಕೆಟ್ ತೆಗೆದು ಕಣ್ಣಿಸಿಸಿದರು. ಅವರ ಜೊತೆಗೆ ಆರ್.ಎಸ್. ಅಂಬ್ರಿಶ್ ಮತ್ತು ಕನಿಷ್ಕ್ ಚೌಹಾಣ್ ತಲಾ 2 ವಿಕೆಟ್‌ಗಳನ್ನು ಕಬಳಿಸಿದರು.

ಈ ಗೆಲುವು ಭಾರತ U19 ತಂಡಕ್ಕೆ ಸರಣಿಯಲ್ಲಿ ಬಲಿಷ್ಠ ಲೀಡ್ ನೀಡಿದ್ದು, ಯುವ ಕ್ರಿಕೆಟ್‌ನಲ್ಲಿ ಭಾರತದ ಪ್ರಾಬಲ್ಯ ಮತ್ತೊಮ್ಮೆ ಸಾಬೀತಾಗಿದೆ.

ಕ್ರೀಡೆ