ಗಿಲ್ ಶತಕ – ಇಂಗ್ಲೆಂಡ್ ಗೆ ಗೆಲ್ಲಲು 608 ರನ್ ಗುರಿ!

ಗಿಲ್ ಶತಕ – ಇಂಗ್ಲೆಂಡ್ ಗೆ ಗೆಲ್ಲಲು 608 ರನ್ ಗುರಿ!

ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಇಂಗ್ಲೆಂಡ್ ತಂಡಕ್ಕೆ 608 ರನ್ ಗಳ ಬೃಹತ್ ಗುರಿಯನ್ನು ನೀಡಿದೆ. ಶುಭಮನ್ ಗಿಲ್ (161 ರನ್, 162 ಎಸೆತಗಳಲ್ಲಿ) ಅಮೋಘ ಶತಕ , ರಿಷಭ್ ಪಂತ್ (65 ರನ್) ಹಾಗೂ ರವೀಂದ್ರ ಜಡೇಜಾ (69 ರನ್ ಅಜೇಯ) ತಂಡದ ಇನ್ನಿಂಗ್ಸ್‌ನ್ನು ಸದೃಢಪಡಿಸಿದರು.

ಭಾರತವು ಮೊದಲ ಇನ್ನಿಂಗ್ಸ್‌ನಲ್ಲಿ 587 ರನ್ ಗಳಿಸಿದ್ದರೆ, ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 407 ರನ್ ಗಳಿಸಿ ಫಾಲೋಆನ್ ತಪ್ಪಿಸಿತು. ನಂತರ ಭಾರತ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 427/6 ರನ್ ಗಳಿಸಿ ಡಿಕ್ಲೇರ್ ಮಾಡಿತು. ಇದರೊಂದಿಗೆ ಒಟ್ಟು ಲೀಡ್ 608 ರನ್ ಆಗಿದೆ – ಇಂಗ್ಲೆಂಡಿಗೆ ಗೆಲ್ಲಲು ಇನ್ನೂ 582 ರನ್ ಅಗತ್ಯವಿದೆ.

ಇಂಗ್ಲೆಂಡ್ ಗೆ ಆರಂಭದಲ್ಲೇ ಶಾಕ್

ಭಾರತದ ಭಾರಿ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಗೆ ಆರಂಭದಲ್ಲೇ ಆಘಾತ. ಮೊದಲ ಓಪನರ್ ಝಾಕ್ ಕ್ರಾಲಿ ಕೇವಲ 7 ಎಸೆತಗಳಲ್ಲಿ ಶೂನ್ಯಕ್ಕೆ ಔಟ್ ಆಗಿ ಪೆವಿಲಿಯನ್ ಸೇರಿದರೆ,ಬೆನ್ ಡಕೆಟ್ ತೀವ್ರ ಆಕ್ರಮಣ ಶೈಲಿಯಲ್ಲಿ ಆಡಲು ಆರಂಭಿಸಿ 15 ಎಸೆತಗಳಲ್ಲಿ 25 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಈ ಹೊತ್ತಿಗೆ ಇಂಗ್ಲೆಂಡ್ 6 ಓವರ್‌ಗಳಲ್ಲಿ 33/2ರನ್ ಗಳಿಸಿದೆ.

ಕ್ರೀಡೆ