ಭಾರತದ ಡಿಜಿಟಲ್ ಕ್ರಾಂತಿಗೆ ಹೊಸ ಮೈಲಿಗಲ್ಲು – ಭಾರತೀಯ ಸಿಮ್ ಇಲ್ಲದ ಎನ್‌ಆರ್‌ಐಗೂ ಯುಪಿಐ ಪಾವತಿಗೆ ಅವಕಾಶ

ಭಾರತದ ಡಿಜಿಟಲ್ ಕ್ರಾಂತಿಗೆ ಹೊಸ ಮೈಲಿಗಲ್ಲು – ಭಾರತೀಯ ಸಿಮ್ ಇಲ್ಲದ ಎನ್‌ಆರ್‌ಐಗೂ ಯುಪಿಐ ಪಾವತಿಗೆ ಅವಕಾಶ

ಭಾರತದ ಡಿಜಿಟಲ್ ಆರ್ಥಿಕತೆ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದೆ. ಈಗ ಭಾರತದ ಹೊರಗಿನ ಭಾರತೀಯರು (NRI) ಗಳು ತಮ್ಮ ಅಂತರರಾಷ್ಟ್ರೀಯ ಮೊಬೈಲ್ ಸಂಖ್ಯೆಗಳ ಬಳಕೆ ಮೂಲಕ ಭಾರತದಲ್ಲಿ ಯುಪಿಐ (UPI) ಪಾವತಿಗಳನ್ನು ಮಾಡಲು ಸಾಧ್ಯವಾಗಿದೆ — ಇದಕ್ಕಾಗಿ ಭಾರತೀಯ ಸಿಮ್‌ಕಾರ್ಡ್ ಅಗತ್ಯವಿಲ್ಲ!

ಇದು ಆರ್ಥಿಕ ನವೋನ್ನತಿಯ ಭರವಸೆಯ ಸೂಚನೆಯಾಗಿದೆ. ಈ ಹೊಸ ಸೌಲಭ್ಯವು ಭಾರತವನ್ನು ಅಂತರರಾಷ್ಟ್ರೀಯ ಪಾವತಿ ವೇದಿಕೆಗಳಲ್ಲಿ ಒಂದು ಹೆಜ್ಜೆ ಮುನ್ನಡೆಸಲಿದೆ. ಎನ್‌ಆರ್‌ಐಗಳು ತಮ್ಮ ಮೂಲದೇಶದಲ್ಲಿ (ಅಥವಾ ತಾವು ವಾಸವಿರುವ ದೇಶಗಳಲ್ಲಿ) ಬಳಕೆ ಮಾಡುವ ಅಂತರರಾಷ್ಟ್ರೀಯ ನಂಬರ್‌ಗಳ ಮೂಲಕ ಭಾರತದಲ್ಲಿ ನೇರವಾಗಿ ಪಾವತಿ ಮಾಡಬಹುದಾಗಿದೆ. ಈ ಮೂಲಕ ಅವರ ಬ್ಯಾಂಕ್ ಲೆಕ್ಕಕ್ಕೆ ನೇರವಾಗಿ ಸಂಪರ್ಕ ಸಾಧಿಸುವಂತಾಗುತ್ತದೆ.

ಈ ಬೆಳವಣಿಗೆಯು ವಿದೇಶಗಳಲ್ಲಿ ವಾಸಿಸುವ ಭಾರತೀಯರಿಗೆ ದೈನಂದಿನ ಹಣಕಾಸು ವ್ಯವಹಾರಗಳಲ್ಲಿ ಸುಲಭತೆಯನ್ನು ನೀಡುವುದು ಮಾತ್ರವಲ್ಲದೆ, ಭಾರತದಲ್ಲಿ ತಮ್ಮ ಕುಟುಂಬ, ಉದ್ಯಮ ಹಾಗೂ ಸೇವೆಗಳಿಗೆ ಹಣಕಾಸು ಬೆಂಬಲ ನೀಡಲು ಹೊಸ ದಾರಿ ನೀಡುತ್ತದೆ.

ಈ ಯೋಜನೆಯು ಇತ್ತೀಚೆಗೆ ಕೇಂದ್ರ ಸರ್ಕಾರ ಮತ್ತು NPCI (National Payments Corporation of India) ನ ವತಿಯಿಂದ ಜಾರಿಗೆ ತರಲಾಗಿದೆ. ಇದರ ಪರಿಣಾಮವಾಗಿ ಭಾರತೀಯ ಯುಪಿಐ ವ್ಯವಸ್ಥೆಯ ವ್ಯಾಪ್ತಿ ಹಾಗೂ ವಿಶ್ವಾಸಾರ್ಹತೆಯನ್ನು ವಿಶ್ವದಾದ್ಯಂತ ಮತ್ತಷ್ಟು ಬಲಪಡಿಸಿದೆ.

ಅಂತರಾಷ್ಟ್ರೀಯ ತಂತ್ರಜ್ಞಾನ ರಾಷ್ಟ್ರೀಯ