ಎಸ್‌ಎಸ್‌ಎಲ್‌ಸಿ 2025 ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಪ್ರಥಮ

ಎಸ್‌ಎಸ್‌ಎಲ್‌ಸಿ 2025 ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಪ್ರಥಮ

ಬೆಂಗಳೂರು: ಈ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸಹಜವಾಗಿ ಬಾಲಕಿಯರದ್ದೇ ಮೇಲುಗೈ ಕಂಡುಬಂದಿದ್ದು, ಶೇ. 74 ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ. ರಾಜ್ಯದ ಒಟ್ಟು ಪಾಸು ಶೇಕಡಾವಾರು ಶೇ. 66.14.

ದಕ್ಷಿಣ ಕನ್ನಡ ಜಿಲ್ಲೆ ಶ್ರೇಷ್ಠ ಪ್ರದರ್ಶನ ನೀಡಿ ಶೇ. 91.12ರೊಂದಿಗೆ ಮೊದಲ ಸ್ಥಾನ ಪಡೆದಿದ್ದು, ಉಡುಪಿಯು ಶೇ. 89.96ರೊಂದಿಗೆ ಎರಡನೇ ಸ್ಥಾನದಲ್ಲಿದೆ. ಉತ್ತರ ಕನ್ನಡ, ಶಿವಮೊಗ್ಗ ಮತ್ತು ಕೊಡಗು ಕ್ರಮವಾಗಿ ಮುಂದುವರೆದಿವೆ. ಇತರೆ ಕೆಲ ಜಿಲ್ಲೆಗಳು ಶೇಕಡಾವಾರು ಕಡಿಮೆಯಾಗಿ ಫಲಿತಾಂಶ ದಾಖಲಿಸಿವೆ.

ಇನ್ನು ಈ ಬಾರಿ 22 ಮಂದಿ 652 ಕ್ಕೆ 652 ಅಂಕ ಪಡೆದ ಸಾಧನೆ ಮಾಡಿದ್ದಾರೆ.

ನಿಮ್ಮ ಹಾಲ್ ಟಿಕೆಟ್ ಸಂಖ್ಯೆ ಸಹಿತ ಫಲಿತಾಂಶ ನೋಡಲು: karresults.nic.in ಗೆ ಭೇಟಿನೀಡಿ.

ನಿಮ್ಮ ಜಿಲ್ಲಾ ಶೇ. ಎಷ್ಟು ಫಲಿತಾಂಶ ಪಡೆದಿದೆ?

  1. ದಕ್ಷಿಣ ಕನ್ನಡ – 91.12%
  2. ಉಡುಪಿ – 89.96%
  3. ಉತ್ತರ ಕನ್ನಡ – 83.19%
  4. ಶಿವಮೊಗ್ಗ – 82.29%
  5. ಕೊಡಗು – 82.21%
  6. ಹಾಸನ – 82.12%
  7. ಶಿರಸಿ – 80.47%
  8. ಚಿಕ್ಕಮಗಳೂರು – 77.90%
  9. ಬೆಂಗಳೂರು ಗ್ರಾಮಾಂತರ – 74.02%
  10. ಬೆಂಗಳೂರು ದಕ್ಷಿಣ – 72.30%
  11. ಬೆಂಗಳೂರು ಉತ್ತರ – 72.27%
  12. ಮಂಡ್ಯ – 69.27%
  13. ಹಾವೇರಿ – 69.03%
  14. ಕೋಲಾರ – 68.47%
  15. ಮೈಸೂರು – 68.39%
  16. ಬಾಗಲಕೋಟೆ – 68.29%
  17. ಗದಗ – 67.72%
  18. ಧಾರವಾಡ – 67.62%
  19. ವಿಜಯನಗರ – 67.62%
  20. ತುಮಕೂರು – 67.03%
  21. ದಾವಣಗೆರೆ – 66.09%
  22. ಚಿಕ್ಕಬಳ್ಳಾಪುರ – 63.64%
  23. ಚಿತ್ರದುರ್ಗ – 63.21%
  24. ರಾಮನಗರ – 63.12%
  25. ಬೆಳಗಾವಿ – 62.16%
  26. ಚಿಕ್ಕೋಡಿ – 62.12%
  27. ಚಾಮರಾಜನಗರ – 61.45%
  28. ಮಧುಗಿರಿ – 60.65%
  29. ಬಳ್ಳಾರಿ – 60.26%
  30. ಕೊಪ್ಪಳ – 57.32%
  31. ಬೀದರ್ – 53.25%
  32. ರಾಯಚೂರು – 52.05%
  33. ಯಾದಗಿರಿ – 51.60%
  34. ವಿಜಯಪುರ – 49.58%
  35. ಕಲಬುರಗಿ – 42.43%
ಶೈಕ್ಷಣಿಕ