ಐಪಿಎಲ್ 2025 – ತವರಿನ ಗೆಲುವಿನ ಕನಸನ್ನು ನನಸು ಮಾಡಿದ ಆರ್ ಸಿ ಬಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರೋಚಕ ಜಯ

ಐಪಿಎಲ್ 2025 – ತವರಿನ ಗೆಲುವಿನ ಕನಸನ್ನು ನನಸು ಮಾಡಿದ ಆರ್ ಸಿ ಬಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರೋಚಕ ಜಯ

ಎಂದಿನಂತೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿ ಬಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲ್ಲುವ ಮೂಲಕ ತವರಿನಲ್ಲಿ ಗೆಲ್ಲುವ ಕನಸನ್ನು ನನಸು ಮಾಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿ ಬಿ ವಿರಾಟ್ ಕೋಹ್ಲಿ ಮತ್ತು ದೇವದತ್ತ ಪಡಿಕಲ್ ಅವರ ಅರ್ಧ ಶತಕದ ನೆರವಿನಿಂದ 5 ವಿಕೇಟ್ ನಷ್ಟಕ್ಕೆ 205 ರನ್ ಗಳಿಸಿ ಗೆಲ್ಲುವ ವಿಶ್ವಾಸ ಮೂಡಿಸಿತು. 206 ರನ್ ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಯಶಸ್ವಿ ಜಯಸ್ವಾಲ್ 19 ಎಸೆತದಲ್ಲಿ 49 ರನ್ ಗಳಿಸಿ ಉತ್ತಮ ಆರಂಭ ನೀಡಿದರು.

ನಂತರ ಜೊತೆಯಾದ ನಿತೀಶ್ ರಾಣ ಮತ್ತು ರಿಯನ್ ಪರಾಗ್ ,ಧ್ರುವ್ ಜುರೆಲ್ ತಂಡವನ್ನು ಗೆಲುವಿನತ್ತ ಕೊಡೊಯ್ಯುವ ಸೂಚನೆ ನೀಡಿದರು. ಆದರೆ ಅಂತಿಮವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಆರ್ ಸಿ ಬಿ ಜೋಷ್ ಹೇಜಲ್‌ವುಡ್ (4/33) ಮಾರಕ ದಾಳಿಯಿಂದ 11 ರನ್ ಗಿಳಿಂದ ಗೆಲ್ಲುವ ಮೂಲಕ ಗೆಲುವಿನ ನಗೆ ಬೀರಿದೆ.

ಕ್ರೀಡೆ