ಐ ಪಿ ಎಲ್ -2025 ಆರ್ ಸಿ ಬಿ ಗೆ ಮತ್ತೆ ತವರಿನಲ್ಲಿ ಹೀನಾಯ ಸೋಲು

ಐ ಪಿ ಎಲ್ -2025 ಆರ್ ಸಿ ಬಿ ಗೆ ಮತ್ತೆ ತವರಿನಲ್ಲಿ ಹೀನಾಯ ಸೋಲು

ಮಳೆಯಿಂದ ತಡವಾಗಿ ಆರಂಭಗೊಂಡ ಆರ್ ಸಿ ಬಿ ಮತ್ತು ಪಂಜಾಬ್ ನಡುವಿನ 14 ಓವರ್ ಗಳ ಪಂದ್ಯದಲ್ಲಿ ಮತ್ತೆ ತವರಿನಲ್ಲಿ ಆರ್ ಸಿ ಬಿ ತಂಡ ಹೀನಾಯವಾಗಿ ಸೋಲನ್ನು ಅನುಭವಿಸಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿದ ಪಂಜಾಬ್ ಆರಂಭದಲ್ಲೇ ಆರ್ ಸಿ ಬಿ ಯ ಪ್ರಮುಖ ವಿಕೆಟ್ ಗಳನ್ನು ಪಡೆದು ಆರ್ ಸಿ ಬಿ ಗೆ ಮರ್ಮಾಘಾತ ನೀಡಿತು 41 ರನ್ ಗಳಿಗೆ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ನಂತರ ತಂಡಕ್ಕೆ ಆಸರೆಯಾದ ಟಿಮ್ ಡೇವಿಡ್ ಕೊನೆಯ ಓವರ್ ನಲ್ಲಿ ಆಕರ್ಷಕ 3 ಸಿಕ್ಸ್ ಹೊಡೆಯುವ ಮೂಲಕ ಅರ್ಧ ಶತಕ ಗಳಿಸಿದರು. ರಜತ್ ಪಾಟಿದಾರ್ 23 ರನ್ ಗಳಿಸಿದನ್ನು ಹೊರತು ಪಡಿಸಿದರೆ ಕೊಹ್ಲಿ ಸಹಿತ ಉಳಿದ ಯಾವುದೇ ಆಟಗಾರ ಎರಡು ಸಂಖ್ಯೆಗಳ ರನ್ ಗಳಿಸಿದೆ ನಿರಾಸೆ ಮೂಡಿಸಿದರು. 96 ರನ್ ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಪಂಜಾಬ್ 12.1 ಓವರ್ ನಲ್ಲಿ 5 ವಿಕೆಟ್ ಕಳೆದುಕೊಂಡು ಸುಲಭ ಜಯ ಗಳಿಸಿತು. ಇದರೊಂದಿಗೆ ತವರಿನಲ್ಲಿ ಕಳಪೆ ಪ್ರದರ್ಶನ ನೀಡುವ ಆರ್ ಸಿ ಬಿ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಕ್ರೀಡೆ