ಆರ್‌ಸಿಬಿಗೆ ತವರಿನಿಂದ ಹೊರಗೆ ಸತತ ನಾಲ್ಕನೇ ಜಯ

ಆರ್‌ಸಿಬಿಗೆ ತವರಿನಿಂದ ಹೊರಗೆ ಸತತ ನಾಲ್ಕನೇ ಜಯ

ಜೈಪುರ: ಇಂದಿನ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ ರಾಯಲ್ಸ್ ವಿರುದ್ಧ 9 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಆರ್‌ಸಿಬಿ ಈ ಸೀಸನ್‌ನಲ್ಲಿ ತವರಿನಿಂದ ಹೊರಗೆ ಸತತ ನಾಲ್ಕನೇ ಗೆಲುವು ದಾಖಲಿಸಿದೆ.

ಹಸಿರು ಜರ್ಸಿಯಲ್ಲಿ ಕಣಕ್ಕಿಳಿದ ಆರ್‌ಸಿಬಿ, ಈ ಪಂದ್ಯದಲ್ಲಿ ಸುಲಭ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತುಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿಯು, 17.3 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು 175 ರನ್ ಗಳಿಸಿತು. ಫಿಲ್ ಸಾಲ್ಟ್ ಅವರ ಆಕರ್ಷಕ ಆಟ(65 ರನ್, 33 ಎಸೆತಗಳಲ್ಲಿ) ಮತ್ತು ವಿರಾಟ್ ಕೊಹ್ಲಿ (62 ರನ್, 45 ಎಸೆತಗಳಲ್ಲಿ) ತಮ್ಮ ತಾಳ್ಮೆ, ದಿಟ್ಟತನದಿಂದ ಮರಳಿ ಗೆಲುವಿಗೆ ನಾಂದಿ ಹಾಡಿದರು.

ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದು ಆಟ ಆಡಿದ ದೇವದತ್ ಪಡಿಕ್ಕಲ್ ಕೂಡಾ ಅಜೇಯ 40 ರನ್ ಗಳಿಸಿ ಗೆಲುವಿಗೆ ತೂಕ ನೀಡಿದರು.ಈ ಜಯದೊಂದಿಗೆ ಆರ್‌ಸಿಬಿ ತವರಿನಿಂದ ಹೊರಗೆ ಆಡಿದ 4 ಪಂದ್ಯಗಳನ್ನು ಗೆದ್ದಿದ್ದು, ಅಂಕ ಪಟ್ಟಿಯಲ್ಲಿ 2 ಅಂಕ ಹೆಚ್ಚಿಸಿಕೊಂಡು 3 ಸ್ಥಾನಕ್ಕೇರಿದೆ.

ಕ್ರೀಡೆ