ಐಪಿಎಲ್ 2025: ರಾಯಲ್ ಚಾಲೆಂಜರ್ಸ್ ತಂಡಕ್ಕೆ ಬೆಂಗಳೂರಲ್ಲಿ ಮತ್ತೆ ಸೋಲು – ದೆಹಲಿ ಕ್ಯಾಪಿಟಲ್ಸ್ ಗೆ ಜಯ

ಐಪಿಎಲ್ 2025: ರಾಯಲ್ ಚಾಲೆಂಜರ್ಸ್ ತಂಡಕ್ಕೆ ಬೆಂಗಳೂರಲ್ಲಿ ಮತ್ತೆ ಸೋಲು – ದೆಹಲಿ ಕ್ಯಾಪಿಟಲ್ಸ್ ಗೆ ಜಯ

ಎಂದಿನಂತೆ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದ ಆರ್ ಸಿ ಬಿ ತಂಡ ಮತ್ತೆ ಬೆಂಗಳೂರಲ್ಲಿ ದೆಹಲಿ ಕ್ಯಾಪಿಟಲ್ ವಿರುದ್ಧ ಸೋಲನ್ನು ಅನುಭವಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿ ಬಿ ಉತ್ತಮ ಆರಂಭ ಪಡೆದರೂ ಮತ್ತೆ 28 ಬಾಲ್ ಗಳಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಾಧಾರಣ ಮೊತ್ತವಾದ 163 ರನ್ ಗಳಿಸಲಷ್ಟೇ ಸಾದ್ಯವಾಯಿತು.

ಫಿಲ್ ಸಾಲ್ಟ್‌ 37 ರನ್ ಮತ್ತು ಟಿಂ ಡೇವಿಡ್‌ನ ಕೊನೆಯ ಹಂತದ 37 ರನ್ ಗಳ ನೆರವಿನಿಂದ 163 ರನ್‌ಗಳನ್ನು ದಾಖಲಿಸಿತು. ಮಧ್ಯದ ಭಾಗದಲ್ಲಿ ವಿರಾಟ್ ಕೊಹ್ಲಿ (22), ಪಾಟಿದಾರ್ (25), ಮತ್ತು ಕ್ರುನಾಲ್ ಪಾಂಡ್ಯ (18) ತಂಡದ ಇನಿಂಗ್ಸ್‌ಗೆ ಆಧಾರವಾದರು.

ಬಳಿಕ 164 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದೆಹಲಿ ಕ್ಯಾಪಿಟಲ್ಸ್, ಕೆ ಎಲ್ ರಾಹುಲ್ ರ ಅಮೋಘ ಬ್ಯಾಟಿಂಗ್ ನೆರವಿನಿಂದ ಸುಲಭವಾಗಿ ಗುರಿಯನ್ನು ತಲುಪಿತು. ರಾಹುಲ್ 53 ಎಸೆತದಲ್ಲಿ 93 ರನ್ ಗಳಿಸಿ ಮಿಂಚಿದರು. ಅಂತಿಮವಾಗಿ 17.5 ಓವರ್ ನಲ್ಲಿ ದೆಹಲಿ ಕ್ಯಾಪಿಟಲ್ ತನ್ನ ಗುರಿ ತಲುಪಿತು.

ಕ್ರೀಡೆ