🏏 ಐಪಿಎಲ್ 2025: ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿಗೆ ರೋಚಕ ಗೆಲುವು!

🏏 ಐಪಿಎಲ್ 2025: ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿಗೆ ರೋಚಕ ಗೆಲುವು!

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025ರ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 12 ರನ್‌ಗಳ ಜಯ ಸಾಧಿಸಿದೆ.

ಆರ್‌ಸಿಬಿ ತಂಡವು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ ಉತ್ತಮ ಪ್ರಾರಂಭ ನೀಡಿತು. ತಂಡವು ನಿಗದಿತ 20 ಓವರ್‌ಗಳಲ್ಲಿ ಕೇವಲ 5 ವಿಕೆಟ್ ನಷ್ಟಕ್ಕೆ ಭರ್ಜರಿ 221 ರನ್‌ಗಳನ್ನು ದಾಖಲಿಸಿತು. ನಾಯಕ ವಿರಾಟ್ ಕೊಹ್ಲಿ 67 ರನ್ ಗಳಿಸಿ ಶ್ರೇಷ್ಠ ಆರಂಭ ಒದಗಿಸಿದರು. ಮಧ್ಯದ ಭಾಗದಲ್ಲಿ ರಜತ್ ಪಾಟೀದಾರ್ ಮಿಂಚಿದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, 64 ರನ್ ಬಾರಿಸಿದರು. ಜಿತೇಶ್ ಶರ್ಮಾ ಶಕ್ತಿ ತುಂಬಿದ ಇನ್ನಿಂಗ್ಸ್ ಆಟವಾಡಿ 40 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸಿದರು. ಮುಂಬೈ ಇಂಡಿಯನ್ಸ್ ಪರ ಹಾರ್ದಿಕ್ ಪಾಂಡ್ಯ ಮತ್ತು ಟ್ರೆಂಟ್ ಬೋಲ್ಟ್ ತಲಾ 2 ವಿಕೆಟ್ ಪಡೆದರೂ, ಆರ್‌ಸಿಬಿಯ ಸ್ಫೋಟಕ ಬ್ಯಾಟಿಂಗ್‌ನ್ನು ತಡೆಯಲು ಸಾಧ್ಯವಾಗಲಿಲ್ಲ.

222 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್‌ಗಳಲ್ಲಿ 209/9 ರನ್‌ಗಳನ್ನು ಮಾತ್ರ ಗಳಿಸಿತು.​ಮುಂಬೈ ಇಂಡಿಯನ್ಸ್ ಪರ ಉತ್ತಮ ಪ್ರದರ್ಶನ ನೀಡಿದ ಆಟಗಾರರಲ್ಲಿ ತಿಲಕ್ ವರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಇವರುಗಳು ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ. ತಿಲಕ್ ವರ್ಮಾ ತಮ್ಮ ಶ್ರೇಷ್ಠ ಆಟದ ಮೂಲಕ ಕೇವಲ 29 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 56 ರನ್‌ಗಳನ್ನು ಬಾರಿಸಿ ತಂಡಕ್ಕೆ ಬಲ ನೀಡಿದರು. ಹಾರ್ದಿಕ್ ಪಾಂಡ್ಯ ಕಪ್ತಾನನ ಜವಾಬ್ದಾರಿಯನ್ನು ಪೂರ್ತಿ ನಿರ್ವಹಿಸಿ, ಕೇವಲ 15 ಎಸೆತಗಳಲ್ಲಿ 42 ರನ್‌ಗಳನ್ನು, 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಗಳಿಸಿ ಅತ್ಯಂತ ವೇಗದ ಇನ್ನಿಂಗ್ಸ್ ಆಟವಾಡಿದರು. ಇವರುಗಳ ಆಟದ ಬಲದಿಂದಾಗಿ ಮುಂಬೈ ಇಂಡಿಯನ್ಸ್ ಗೆಲುವಿನ ಹೋರಾಟದಲ್ಲಿ ಮುಂದುವರೆದರೂ, ಇತರರ ಬೆಂಬಲದ ಕೊರತೆಯಿಂದಾಗಿ ಗುರಿ ತಲುಪಲಾಗಲಿಲ್ಲ

ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ವಾಂಖೆಡೆ ಸ್ಟೇಡಿಯಂನಲ್ಲಿ 10 ವರ್ಷಗಳ ನಂತರ ನಡೆದ ಪಂದ್ಯ . ಕೊನೆಯ ಬಾರಿ ಈ ಎರಡು ತಂಡಗಳು ವಾಂಖೆಡೆನಲ್ಲಿ 2015ರಲ್ಲಿ ಮುಖಾಮುಖಿಯಾಗಿದ್ದವು

ಆರ್‌ಸಿಬಿ ಬೌಲರ್‌ಗಳ ದಾಳಿ ಮುಂಬೈ ಇಂಡಿಯನ್ಸ್ ವಿರುದ್ಧದ ಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಕ್ರುನಾಲ್ ಪಾಂಡ್ಯ ತಮ್ಮ 4 ಓವರ್‌ಗಳಲ್ಲಿ 45 ರನ್ ನೀಡಿ 4 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ, ತಂಡಕ್ಕೆ ಅಮೂಲ್ಯ ಯಶಸ್ಸು ತಂದರು. ಜೊತೆಗೆ ಯಾಶ್ ದಯಾಲ್ (4 ಓವರ್‌ಗಳಲ್ಲಿ 46 ರನ್ ನೀಡಿ 2 ವಿಕೆಟ್) ಮತ್ತು ಜೋಷ್ ಹಾಜಲ್ವುಡ್ (4 ಓವರ್‌ಗಳಲ್ಲಿ 37 ರನ್ ನೀಡಿ 2 ವಿಕೆಟ್) ತಲಾ ಎರಡು ವಿಕೆಟ್ ಪಡೆದು ಮುಂಬೈ ಬ್ಯಾಟಿಂಗ್ ಲೈನ್‌ಅಪ್‌ನ ಪ್ರಮುಖ ಆಟಗಾರರನ್ನು ಪೆವಿಲಿಯನ್‌ಗೆ ಮರಳಿಸಿದರು

Uncategorized