ಸದ್ದಿಲ್ಲದೇ ಬೆಲೆ ಏರಿಸಿಕೊಂಡ ದೀಪದ ಎಣ್ಣೆ

ಸದ್ದಿಲ್ಲದೇ ಬೆಲೆ ಏರಿಸಿಕೊಂಡ ದೀಪದ ಎಣ್ಣೆ

ಬೆಂಗಳೂರು: ದೀಪದ ಎಣ್ಣೆಯ ಬೆಲೆ ಕಳೆದ ವರ್ಷಕ್ಕಿಂತ ಗಣನೀಯವಾಗಿ ಏರಿಕೆಯಾಗಿದ್ದು, ಗ್ರಾಹಕರು ಖರೀದಿಗೆ ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ.

ಬೆಲೆಯ ಏರಿಕೆ
ಬೋಳಾಸ್ ಬ್ರ್ಯಾಂಡ್‌ನ ನಂದಾದೀಪ ಎಣ್ಣೆ ಪ್ರತಿ ಲೀಟರ್ ₹115 – ₹130 ಇತ್ತು. ಆದರೆ, ಈ ವರ್ಷ ₹145 – ₹160 ರವರೆಗೆ ಮಾರಾಟವಾಗುತ್ತಿದೆ.
ಸೈಕಲ್ ಮತ್ತು ಆನಂದಂ ದೀಪದ ಎಣ್ಣೆ ದರ ಕಳೆದ ವರ್ಷ ₹110 – ₹125 ಇತ್ತು. ಈ ವರ್ಷ ₹145 – ₹175 ಕ್ಕೆ ಏರಿಕೆಯಾಗಿದೆ.

ತೂಕದಲ್ಲಿ ಕಡಿತ

ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ, ಕೆಲವು ಉತ್ಪಾದನಾ ಕಂಪನಿಗಳು ಎಣ್ಣೆಯ ಬೆಲೆಯನ್ನು ಕಡಿಮೆಯಾಗಿರುವಂತೆ ತೋರಿಸಿ, ಎಣ್ಣೆಯ ತೂಕವನ್ನು ಕಡಿಮೆ ಮಾಡುತ್ತಿರುವುದು ಕಂಡು ಬಂದಿದೆ.
ನಮಗೆಲ್ಲಾ ತಿಳಿದಿರುವಂತೆ, 1 ಲೀಟರ್ (1000 ಮಿಲಿಲೀಟರ್) ಬಾಟಲ್‌ಗಳ ಬದಲು, ಈಗ 930 ಮಿಲಿಲೀಟರ್ ಮಾತ್ರ ನೀಡುತ್ತಿದ್ದಾರೆ. ಇನ್ನೂ ಕೆಲವು ಕಂಪನಿಗಳು 760 ರಿಂದ – 800 ಮಿಲಿಲೀಟರ್ ಮಾತ್ರ ಪ್ಯಾಕೇಜಿಂಗ್ ಮಾಡುತ್ತಿರುವುದರಿಂದ ಗ್ರಾಹಕರಿಗೆ ನೇರವಾಗಿ ನಷ್ಟವಾಗುತ್ತಿದೆ.

ಗ್ರಾಹಕರ ಮೇಲೆ ಪರಿಣಾಮ

ದರ ಹೆಚ್ಚಾದ ಕಾರಣ ದೀಪದ ಎಣ್ಣೆ ಖರೀದಿ ಕಡಿಮೆಯಾಗುವ ಸಾಧ್ಯತೆಯಿದೆ. ತೂಕ ಕಡಿಮೆಯಾಗುತ್ತಿರುವ ಕಾರಣ ಗ್ರಾಹಕರಿಗೆ ಅನ್ಯಾಯವಾಗುತ್ತಿದೆ, ಹಾಗಾಗಿ ಈ ಬಗ್ಗೆ ಸ್ಪಷ್ಟ ನಿಯಮಗಳು ಅಗತ್ಯ. ಸರ್ಕಾರ ಹಾಗೂ ನಿಯಂತ್ರಣ ಸಂಸ್ಥೆಗಳು ಈ ವಿಷಯದಲ್ಲಿ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ರಾಜ್ಯ