ಆರ್‌ಸಿಬಿ ಬೌಲರ್‌ಗಳ ನಿಖರ ದಾಳಿಗೆ ಬೆದರಿದ ಸಿಎಸ್‌ಕೆ: 17 ವರುಷಗಳ ಬಳಿಕ ಚೆಪಾಕ್ ನಲ್ಲಿ ಚೆನ್ನೈ ವಿರುದ್ಧ ಭರ್ಜರಿ ಜಯ.

ಆರ್‌ಸಿಬಿ ಬೌಲರ್‌ಗಳ ನಿಖರ ದಾಳಿಗೆ ಬೆದರಿದ ಸಿಎಸ್‌ಕೆ: 17 ವರುಷಗಳ ಬಳಿಕ ಚೆಪಾಕ್ ನಲ್ಲಿ ಚೆನ್ನೈ ವಿರುದ್ಧ ಭರ್ಜರಿ ಜಯ.

ಚೆನ್ನೈ: ಐಪಿಎಲ್ 2025 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇತಿಹಾಸವನ್ನು ಬರೆದಿದೆ! ಚೆಪಾಕ್ ಮೈದಾನದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ ತಂಡ 50 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 7 ವಿಕೆಟ್ ಗೆ 197 ರನ್ ಪೇರೆಪಿಸಿತು.

ಈ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆ ಬ್ಯಾಟ್ಸ್‌ಮನ್‌ಗಳು ಆರ್‌ಸಿಬಿ ಬೌಲರ್‌ಗಳ ದಾಳಿಗೆ ಆರಂಭದಲ್ಲಿಯೇ ಸಂಕಷ್ಟಕ್ಕೆ ಸಿಲುಕಿದರು. ಕೊನೆಯದಾಗಿ ಸಿಎಸ್‌ಕೆ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿತು.ಈ ಜಯದೊಂದಿಗೆ ಆರ್‌ಸಿಬಿ ತಂಡ ಪಾಯಿಂಟ್ ಪಟ್ಟಿಯಲ್ಲಿ ಮುನ್ನಡೆ ಸಾಧಿಸಿದೆ.

ಕ್ರೀಡೆ