ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆಯಲ್ಲಿ ಜಾತ್ರೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದೆ. ದಿನಾಂಕ 28-03-2025 ರಂದು ರಾತ್ರಿ 8:00 ಗಂಟೆಯಿಂದ ಕಾಳ ಮುಲಿಯನ್ ಮತ್ತು ಮುಕಂಡನ್ ದೈವಗಳ ಬೆಳ್ಳಾಟಗಳು ನಡೆದಿದ್ದು, ಅದರ ಬಳಿಕ ತುಳು ಕೋಲಗಳ ಬೆಳ್ಳಾಟ 2 ಹಾಗೂ ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ ಸೇವೆಗಳು ನಡೆದವು






ಅಂತಿಮವಾಗಿ, ತುಳು ಕೋಲಗಳ ತಿರುವಪ್ಪಗಳು ಕೂಡ ನಡೆದಿದ್ದು, ನೂರಾರು ಭಕ್ತಾದಿಗಳು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಿದ್ದಾರೆ. ನಾಳೆ ಬೇಟೆ ಕರಿಮಗನ್ ಈಶ್ವರನ್ ದೈವ ಸೇವೆ ನಡೆಯಲಿದೆ.