ಬೆಂಗಳೂರು: ಕರ್ನಾಟಕ ಸರ್ಕಾರ ಇ-ಪ್ರಸಾದ ಯೋಜನೆಯನ್ನು ಪ್ರಾರಂಭಿಸಿದ್ದು, ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ಪ್ರಸಿದ್ಧ ದೇವಾಲಯಗಳಿಂದ ಭಕ್ತರು ಮನೆಯಲ್ಲಿದ್ದೇ ಪ್ರಸಾದವನ್ನು ಆರ್ಡರ್ ಮಾಡಿಕೊಳ್ಳಬಹುದು.

ಪ್ರಾಯೋಗಿಕ ಹಂತದಲ್ಲಿ 14 ಪ್ರಮುಖ ದೇವಾಲಯಗಳು ಈ ಸೇವೆಯಲ್ಲಿ ಭಾಗಿಯಾಗಿದ್ದು, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಸವದತ್ತಿ, ಗಣಗಾಪುರ ಸೇರಿವೆ. ಈ ಸೇವೆಯನ್ನು ಸಾಮಾನ್ಯ ಸೇವಾ ಕೇಂದ್ರಗಳು (CSC) ಮತ್ತು ಇ-ಆಡಳಿತ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ.
*ಪ್ರಸಾದ ಆರ್ಡರ್ ಮಾಡುವುದು ಹೇಗೆ?*ವೆಬ್‌ಸೈಟ್‌ಗೆ ಭೇಟಿ ನೀಡಿ: csc.devalayas.com• ಲಾಗಿನ್ ಮಾಡಿ ಅಥವಾ ಹೊಸ ಖಾತೆ ತಯಾರಿಸಿ• ದೇವಸ್ಥಾನ ಆಯ್ಕೆ ಮಾಡಿ• ಪ್ರಸಾದ ಪ್ಯಾಕೇಜ್ ಆರಿಸಿ (₹100-₹150)• ಆನ್‌ಲೈನ್ ಪಾವತಿ ಮಾಡಿ ಮತ್ತು ಡೋರ್ ಡೆಲಿವರಿ ಪಡೆಯಿರಿ.ಸರ್ಕಾರ ಭಕ್ತರಿಂದ ಒದಗುವ ಪ್ರತಿಕ್ರಿಯೆಯ ಆಧಾರದಲ್ಲಿ ಇ-ಪ್ರಸಾದ ಸೇವೆಯನ್ನು 400ಕ್ಕೂ ಹೆಚ್ಚು ದೇವಾಲಯಗಳಿಗೆ ವಿಸ್ತರಿಸಲು ಯೋಜನೆ ರೂಪಿಸಿದೆ.ಇದು ಮಾತ್ರವಲ್ಲದೆ, ಆನ್‌ಲೈನ್ ಪೂಜೆ ಬುಕ್ಕಿಂಗ್ ಸೇವೆ ಕೂಡ ಲಭ್ಯವಿದ್ದು, ಮಂಗಳಾರತಿ, ಅರ್ಚನೆ, ಪುಷ್ಪಾಲಂಕಾರ ಪೂಜೆ, ಅಷ್ಟೋತ್ತರ ಸೇರಿ 15 ರೀತಿಯ ಪೂಜೆಗಳ ಸೇವೆ ನೀಡಲಾಗುತ್ತಿದೆ.
ಈಗಾಗಲೇ ಬೆಂಗಳೂರು ಬನಶಂಕರಿ, ಸೌದತ್ತಿ ಯಲ್ಲಮ್ಮ, ಮೈಸೂರು ಚಾಮುಂಡೇಶ್ವರಿ, ನಂಜನಗೂಡು ಶ್ರೀಕಂಠೇಶ್ವರ, ಕಟೀಲು ದುರ್ಗಾಪರಮೇಶ್ವರಿ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ಲೈವ್ ಸ್ಟ್ರೀಮಿಂಗ್ ಮೂಲಕ ನಿತ್ಯಪೂಜೆ ವೀಕ್ಷಿಸಲು ಅವಕಾಶವಿದೆ.ಡಿಜಿಟಲ್ ಸೇವೆಗಳ ಮೂಲಕ ಭಕ್ತರು ದೇವಸ್ಥಾನದ ಅನುಭವ ಪಡೆಯಲು ಇದು ಹೊಸ ಅವಕಾಶ ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.