ಭಾರತ ಚಾಂಪಿಯನ್ಸ್: ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಭರ್ಜರಿ ಗೆಲುವು

ಭಾರತ ಚಾಂಪಿಯನ್ಸ್: ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಭರ್ಜರಿ ಗೆಲುವು

ದುಬೈ: ಭಾರತವು ಚಾಂಪಿಯನ್ಸ್ ಟ್ರೋಫಿ 2025 ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಅಂತರದಿಂದ ಅದ್ಭುತ ಜಯ ಸಾಧಿಸಿ ಮತ್ತೊಂದು ಐತಿಹಾಸಿಕ ಕಿರೀಟವನ್ನು ತಮ್ಮದಾಗಿಸಿಕೊಂಡಿದೆ.ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 251 ರನ್ ಕಲೆ ಹಾಕಿತು. ಡೇರಿಲ್ ಮಿಚೆಲ್ (63) ಮತ್ತು ಮೈಕೆಲ್ ಬ್ರೇಸ್ವೆಲ್ (ಅಜೇಯ 53) ತಂಡದ ಪ್ರಮುಖ ಮೊತ್ತ ಪೇರಿಸಿದವರು.

ಆದರೆ,ಭಾರತದ ಬೌಲರ್‌ಗಳು ಶ್ರೇಷ್ಠ ಪ್ರದರ್ಶನ ನೀಡಿದ ಕಾರಣ ನ್ಯೂಜಿಲೆಂಡ್ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. 251 ರನ್ ಗುರಿಯನ್ನು ಬೆನ್ನಟ್ಟಿ ಭಾರತ 49 ಓವರಿಗೂ ಮುನ್ನವೇ 6 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.

ನಾಯಕ ರೋಹಿತ್ ಶರ್ಮಾ 76 ರನ್‌ಗಳ ಮಹತ್ವದ ಇನ್ನಿಂಗ್ಸ್ ಆಡಿದರೆ, ಶ್ರೇಯಸ್ ಅಯ್ಯರ್ 48 ಹಾಗೂ ಕೆಎಲ್ ರಾಹುಲ್ ಅಜೇಯ 34 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.ಈ ಜಯದೊಂದಿಗೆ ಭಾರತವು ಕ್ರಿಕೆಟ್ ಜಗತ್ತಿನಲ್ಲಿ ತನ್ನ ಪ್ರಭಾವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಕ್ರೀಡೆ