
ಮೈಸೂರು: ಮೈಸೂರಿನ ಇನ್ಫೋಸಿಸ್ ಆವರಣದಲ್ಲಿ ಚಿರತೆ ಪತ್ತೆಯಾಗಿದೆ ಎಂದು ತಡವಾಗಿ ತಿಳಿದುಬಂದಿದೆ. ಡಿಸೆಂಬರ್ 30 ರ ರಾತ್ರಿ ಮೈಸೂರಿನ ಇನ್ಫೋಸಿಸ್ ಆವರಣದಲ್ಲಿ ಚಿರತೆ ಕಂಡುಬಂದಿದ್ದು, ಉದ್ಯೋಗಿಗಳು ಮತ್ತು ಸುತ್ತಮುತ್ತಲಿನ ನಿವಾಸಿಗಳಿಗೆ ಆತಂಕದ ವಾತಾವರಣವನ್ನುಂಟುಮಾಡಿತ್ತು. ಹೆಬ್ಬಾಳ ಕೈಗಾರಿಕಾ ಪ್ರದೇಶದ ಸಮೀಪ 345 ಎಕರೆ ಪ್ರದೇಶದಲ್ಲಿ ಹಬ್ಬಿಕೊಂಡಿರುವ ಮೈಸೂರಿನ ಇನ್ಫೋಸಿಸ್ನ ಆವರಣದಲ್ಲಿ ಚಿರತೆ ಕಂಡುಬಂದಿದ್ದು ಭದ್ರತಾ ಸಿಬ್ಬಂದಿಗೆ ಆತಂಕದ ವಿಷಯವಾಯಿತು. ನಿಗಾ ಕ್ಯಾಮೆರಾಗಳಲ್ಲಿ ರಾತ್ರಿ 2 ಗಂಟೆಗೆ ಚಿರತೆ ಕಟ್ಟಡದ ಸಮೀಪ ಸಂಚರಿಸುತ್ತಿರುವ ದೃಶ್ಯ ಕಂಡುಬಂದಿದ್ದು, ಅದರ ಚಲನವಲನಗಳು ಕಂಡುಬಂದಿದ್ದು, ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು.


ಭದ್ರತಾ ಕ್ರಮಗಳು:
ಚಿರತೆ ಕಂಡುಬಂದ ತಕ್ಷಣ, ಇನ್ಫೋಸಿಸ್ ಸಂಸ್ಥೆ ತನ್ನ ಉದ್ಯೋಗಿಗಳ ಭದ್ರತೆಗಾಗಿ ತಕ್ಷಣ ಕ್ರಮಗಳನ್ನು ತೆಗೆದುಕೊಂಡಿತು. ಇದರಲ್ಲಿ ಪ್ರಮುಖವಾಗಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಲಾಯಿತು. ತಮ್ಮ ಉದ್ಯೋಗಿಗಳಿಗೆ ಯಾವುದೇ ರೀತಿಯ ಅಪಾಯವಾಗಬಾರದೆಂಬ ನಿಟ್ಟಿನಲ್ಲಿ ಈ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.
ಅರಣ್ಯ ಇಲಾಖೆಯ ಕಾರ್ಯಾಚರಣೆ:

ಚಿರತೆ ಪತ್ತೆಯಾದ ನಂತರ, ಕರ್ನಾಟಕ ಅರಣ್ಯ ಇಲಾಖೆ ಭದ್ರತಾ ಸಿಬ್ಬಂದಿಯೊಂದಿಗೆ ವಿಶೇಷ ಕಾರ್ಯಾಚರಣೆ ಆರಂಭಿಸಿತು. ಡ್ರೋನ್, ಥರ್ಮಲ್ ಇಮೇಜಿಂಗ್ ಮುಂತಾದ ತಂತ್ರಜ್ಞಾನಗಳ ಸಹಾಯದಿಂದ ಚಿರತೆಯನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಯಿತು. ಅಲ್ಲದೆ, ಚಿರತೆಯನ್ನು ಹಿಡಿಯಲು ಅತ್ಯಂತ ಹೆಚ್ಚು ಶ್ರಮಪಡಲಾಗಿದ್ದು, ಹಲವು ಕಡೆಗಳಲ್ಲಿ ಬೋನುಗಳನ್ನು ಟ್ರಾಂಕ್ವಿಲೈಸರ್) ಬಂದೂಕುಗಳನ್ನು ಇರಿಸಲಾಯಿತು.
ಅಪ್ರತಿಮ ತಂತ್ರ: ಹೆಣ್ಣು ಚಿರತೆಯ ಮೂತ್ರ ಬಳಕೆ
ಇಷ್ಟೆಲ್ಲಾ ಪ್ರಯತ್ನ ಪಟ್ಟರೂ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಚಿರತೆಯನ್ನು ಬೋನಿಗೆ ಸೆಳೆಯಲು ಅರಣ್ಯ ಇಲಾಖೆ ಒಂದು ವಿನೂತನ ತಂತ್ರವನ್ನು ಬಳಸಿತು. ನಿಗಾ ಕ್ಯಾಮರಾದಲ್ಲಿದ್ದ ಫೋಟೋ ಸಹಾಯದಿಂದ ಅಧಿಕಾರಿಗಳಿಗೆ ಅಲ್ಲಿರುವುದು ಗಂಡು ಚಿರತೆ ಎಂದು ತಿಳಿಯಿತು. ಹಾಗಾಗಿ ಹೆಣ್ಣು ಚಿರತೆಯ ಮೂತ್ರವನ್ನು ಕೆಲವು ಸ್ಥಳಗಳಲ್ಲಿ ಎರಚಿ ಚಿರತೆಯನ್ನು ಬೋನಿನತ್ತ ಸೆಳೆಯುವ ಪ್ರಯತ್ನವನ್ನು ಮಾಡಲಾಯಿತು. ಈ ಮೂತ್ರದ ವಾಸನೆಗೆ ಹೊರಬಂದ ಚಿರತೆ ಯಾವುದೇ ಗಾಯಗಳಾಗದೇ ಸುರಕ್ಷಿತವಾಗಿ ಬೋನಿನಲ್ಲಿ ಸಿಲುಕಿಕೊಂಡಿತು.
20 ದಿನಗಳ ನಿರಂತರ ಶ್ರಮದ ನಂತರ, ಈ ವಿಶೇಷ ತಂತ್ರದ ಸಹಾಯದಿಂದ ಚಿರತೆಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಯಿತು. ಅರಣ್ಯ ಇಲಾಖೆ ಚಿರತೆಯನ್ನು ಬೇಟೆಗಾರರಿಂದ ಮತ್ತು ಜನರು ಒತ್ತಡದಿಂದ ದೂರ, ಸುರಕ್ಷಿತ ಸ್ಥಳಕ್ಕೆ ಕಳುಹಿಸಿತು.
ಇದು ಇನ್ಫೋಸಿಸ್ ಮೈಸೂರು ಆವರಣದಲ್ಲಿ ಮೊದಲ ಬಾರಿಗೆ ನಡೆದ ಘಟನೆ ಅಲ್ಲ. 2011 ರಲ್ಲಿ ಸಹ ಇಂತಹದ್ದೇ ಘಟನೆ ನಡೆದಿತ್ತು. ಚಿರತೆ ಆಕಸ್ಮಿಕವಾಗಿ ಆವರಣದ ಒಳಗೆ ಪ್ರವೇಶಿಸಿತ್ತು. ಇನ್ಫೋಸೀಸ್, ಅರಣ್ಯ ಪ್ರದೇಶದ ಸಮೀಪ ಇರುವುದರಿಂದ ಇಂತಹ ಘಟನೆಗಳ ಸಂಭವನೀಯತೆ ಹೆಚ್ಚಿರಬಹುದು.
ಅರಣ್ಯ ಇಲಾಖೆಯ ಸಲಹೆ:
ಘಟನೆಯ ನಂತರ, ಅರಣ್ಯ ಇಲಾಖೆ ಇನ್ಫೋಸಿಸ್ಗೆ ಕೆಲವು ಮುನ್ನೆಚ್ಚರಿಕಾ ಸಲಹೆಗಳನ್ನು ನೀಡಿತು. ಇಂದಿನಿಂದ ಆವರಣದಲ್ಲಿ ಹೆಚ್ಚುವರಿ ಸುರಕ್ಷತಾ ವ್ಯವಸ್ಥೆಗಳನ್ನು ಹೇರಬೇಕು, ಸಿಸಿಟಿವಿ ಕ್ಯಾಮರಾಗಳನ್ನು ಮತ್ತಷ್ಟು ಬಲಪಡಿಸಬೇಕು ಮತ್ತು ವನ್ಯಜೀವಿಗಳಿಗೆ ಬರುವುದಕ್ಕೆ ಆಗದ ರೀತಿಯ ತಡೆಗೋಡೆಯನ್ನು ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದೆ.