ಆಕಾಶ ನೀನೆ ನೀಡೊಂದು ಗೂಡು ಎಂದು ಹಾಡಿ, ಜನರ ಮನಗೆದ್ದ ಹೂ ಮಾರುವ ಹುಡುಗ ದ್ಯಾಮೇಶ
ದ್ಯಾಮೇಶ ಉತ್ತರ ಕರ್ನಾಟಕ ಜಿಲ್ಲೆಯ ಕಾರಟಗಿ ಊರಿನ ಹೂ ಮಾರುವ ಹುಡುಗ. ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡ ದ್ಯಾಮೇಶ, ತನ್ನ ಅಜ್ಜಿಯ ಜೊತೆ ಪುಟ್ಟ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾನೆ. ದೇವರಿಗೆ ಸಿರಿತನ - ಬಡತನ ಎಂಬ ಬೇಧವಿಲ್ಲ. ಒಪ್ಪೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ದ್ಯಾಮೇಶನಿಗೆ ವರವಾಗಿ ಬಂದದ್ದು ಆತನ ಕಂಠಸಿರಿ.…










