ಕೊಹ್ಲಿ ಕಮಾಲ್, ಪಾಕಿಸ್ತಾನ ಕಂಗಾಲು – ಸೆಮಿಫೈನಲ್‌ ಗೇರಿದ ಭಾರತ

ಕೊಹ್ಲಿ ಕಮಾಲ್, ಪಾಕಿಸ್ತಾನ ಕಂಗಾಲು – ಸೆಮಿಫೈನಲ್‌ ಗೇರಿದ ಭಾರತ

ದುಬೈನಲ್ಲಿ ಇಂದು ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಮಣಿಸಿ, ಚಾಂಪಿಯನ್ಸ್‌ ಟ್ರೋಫಿ ಸೆಮಿಫೈನಲ್‌ ಗೆ ಲಗ್ಗೆ ಇಟ್ಟಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಮಿಂಚಿದ ಭಾರತ, ಪಾಕಿಸ್ತಾನ ತಂಡವನ್ನು 241 ರನ್‌ಗಳಿಗೆ ಆಲೌಟ್ ಮಾಡಿತು.

ಚೇಸಿಂಗ್‌ನಲ್ಲಿ ಶುಭಮನ್ ಗಿಲ್ (46) ಮತ್ತು ವಿರಾಟ್ ಕೊಹ್ಲಿ (100*) ಅಬ್ಬರಿಸಿದರು. ನಾಯಕ ರೋಹಿತ್ ಶರ್ಮಾ (20) ಸಿಕ್ಸರ್‌ಗಳ ಮೂಲಕ ಅದ್ಧೂರಿ ಆರಂಭ ನೀಡಿದರೂ ಬೇಗನೇ ಔಟಾದರು. ಆದರೆ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ (56) ತಂಡವನ್ನು ಜಯದ ದಡ ಸೇರಿಸಿದರು.

ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸೆಮಿಫೈನಲ್‌ ಗೆ ಸ್ಥಾನ ಪಕ್ಕಾ ಮಾಡಿಕೊಂಡಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಂಭ್ರಮ ಜೋರಾಗಿದೆ.

Uncategorized