
ಮಂಗಳೂರು : ಮನಪಾ ಮೇಯರ್ ಮನೋಜ್ ಕುಮಾರ್ ಅವರ ಸಕಾಲಿಕ ಸಮಯಪ್ರಜ್ಞೆಯಿಂದ ಮಂಗಳೂರಿನ ಕದ್ರಿ ಉದ್ಯಾನವನ ಪರಿಸರದಲ್ಲಿ ದೊಡ್ಡ ಅಗ್ನಿ ಅವಘಡವೊಂದು ತಪ್ಪಿದಂತಾಗಿದೆ.


ಶುಕ್ರವಾರ ರಾತ್ರಿ ಮೇಯರ್ ಮನೋಜ್ ಅವರು ಇದೇ ಪರಿಸರದಲ್ಲಿ ಹೋಗುತ್ತಿದ್ದಾಗ ಬೆಂಕಿ ತಗುಲಿದ್ದ ಸ್ಥಳವನ್ನು ನೋಡಿ ಕೂಡಲೇ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಒಂದು ವೇಳೆ ಸಮಯ ಮೀರುತ್ತಿದ್ದರೆ ಬೆಂಕಿಯು ಇಡೀ ಉದ್ಯಾನ ವನಕ್ಕೆ ಹರಡಿ ಅನಾಹುತ ಸಂಭವಿಸುತ್ತಿತ್ತು ಎನ್ನಲಾಗಿದೆ. ಆದರೆ ಮೇಯರ್ ರ ಸಕಾಲಿಕ ಕ್ರಮದಿಂದ ಅವಘಡ ತಪ್ಪಿದೆ. ಇನ್ನು ಘಟನಾ ಸ್ಥಳದಲ್ಲಿ ಸದಸ್ಯರಾದ ನಯನ ಆರ್ ಕೋಟ್ಯಾನ್ ಹಾಗೂ ಸಾರ್ವಜನಿಕರು ಜತೆಗಿದ್ದರು.