ಮಡಿಕೇರಿ : ಸ್ಕೀಂ ಹೆಸರಲ್ಲಿ ವಂಚನೆ; ಐವರು ಆರೋಪಿಗಳ ಬಂಧನ

ಮಡಿಕೇರಿ : ಸ್ಕೀಂ ಹೆಸರಲ್ಲಿ ವಂಚನೆ; ಐವರು ಆರೋಪಿಗಳ ಬಂಧನ

ಮಡಿಕೇರಿ: ನಗರದ ರಾಣಿಪೇಟೆಯ ಮಳಿಗೆಯೊಂದರಲ್ಲಿ ಗ್ರಾಹಕರಿಗೆ ಸ್ಕೀಂ ಹೆಸರಿನಲ್ಲಿ ದುಬಾರಿ ಬೆಲೆಯ ಬಹುಮಾನ ನೀಡುವ ಆಮಿಷ ಒಡ್ಡುತ್ತಿದ್ದ ಆರೋಪದ ಮೇರೆಗೆ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ.

‘ಆರೋಪಿಗಳು ಗ್ರಾಹಕರಿಂದ ತಿಂಗಳಿಗೆ ₹ 1 ಸಾವಿರ ಹಣವನ್ನು 24 ತಿಂಗಳ ಕಾಲ ಪಡೆದು ಪ್ರತಿ ತಿಂಗಳೂ ಡ್ರಾ ನಡೆಸಿ, ದುಬಾರಿ ಬೆಲೆಯ ವಸ್ತುಗಳನ್ನು ಬಹುಮಾನವಾಗಿ ನೀಡುವ ಆಮಿಷ ಒಡ್ಡಿದ್ದರು. ಸುಮಾರು 1 ಸಾವಿರಕ್ಕೂ ಅಧಿಕ ಗ್ರಾಹಕರು ಹಣ ನೀಡಿದ್ದರು. ಪರಿಶೀಲನೆ ನಡೆಸಿದಾಗ ಸೂಕ್ತ ದಾಖಲಾತಿಗಳು ಸಿಗಲಿಲ್ಲ. ಜೊತೆಗೆ, ಇದು ನಿಯಮ ಬಾಹಿರ ಚಟುವಟಿಕೆ ಎನಿಸಿತು. ಹಾಗಾಗಿ, ಮಳಿಗೆ ಮುಚ್ಚಿಸಿ, ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪೊಲೀಸರು ನಗರ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜ್ಯ