ಶುಭಮನ್ ಗಿಲ್ ಶತಕದ ಮಿಂಚು: ಭಾರತಕ್ಕೆ ಗೆಲುವಿನ ಆರಂಭ

ಶುಭಮನ್ ಗಿಲ್ ಶತಕದ ಮಿಂಚು: ಭಾರತಕ್ಕೆ ಗೆಲುವಿನ ಆರಂಭ

ದುಬೈ (ಫೆ.20): ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಭರ್ಜರಿ ಆರಂಭವನ್ನು ಪಡೆದಿದೆ. ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 6 ವಿಕೆಟ್ ಭರ್ಜರಿ ಜಯ ದಾಖಲಿಸಿದೆ. ಬಾಂಗ್ಲಾದೇಶ 229 ರನ್ ಗುರಿ ನೀಡಿದರೆ, ಭಾರತ ಗುರಿಯನ್ನು ಸುಲಭವಾಗಿ ತಲುಪಿತು . ಆರಂಭದಲ್ಲಿ ವಿಕೆಟ್ ಗಳು ಉರುಳಿದರೂ, ಬಳಿಕ ಗಿಲ್ ಅವರ ಶತಕದ ಮಾಯಾಜಾಲ ಭಾರತವನ್ನು ಗೆಲುವಿನ ಹಾದಿಗೆ ಕೊಂಡೊಯ್ಯಿತು. ಜೊತೆಗೆ ಇತರ ಬ್ಯಾಟ್ಸ್‌ಮನ್‌ಗಳ ಸಹಕಾರದಿಂದ ಭಾರತ ಸುಲಭವಾಗಿ ಗೆಲುವು ಸಾಧಿಸಿತು.ಈ ಜಯದೊಂದಿಗೆ ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಶುಭಾರಂಭ ಮಾಡಿದೆ.

Uncategorized