
ಮಂಗಳೂರು: ಕಂಕನಾಡಿ ನಗರ ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಜೂಜು ಅಡ್ಡೆಗಳಿಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಒಟ್ಟು 20 ಮಂದಿಯನ್ನು ಬಂಧಿಸಿ 75,920 ರೂ. ನಗದು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


ಕಂಕನಾಡಿ ನಗರ ಠಾಣೆ ವ್ಯಾಪ್ತಿಯ ಆಡಂಕುದ್ರುವಿನಲ್ಲಿ ಅಂದರ್ – ಬಾಹರ್ ಆಟದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ಸತ್ತಾರ್ ಸಾಬ್, ಸಂಜಯ ಸಾಹಿ, ಜಿತೇಂದ್ರ ಚೌಧರಿ, ರಾಮ್ ಪುಕಾರ್, ಅಭಿರಾಮ್ ರಾಯ್, ಕಬುತ್ ರಾಯ್, ಸಮರ್ಜೀತ್, ಮುರುಳಿ ಮಾತೋ ಅವರನ್ನು ಬಂಧಿಸಿ ಆಟಕ್ಕೆ ಉಪಯೋಗಿಸಿದ ನಗದು 42,800 ರೂ. ಇಸ್ಪೀಟ್ ಕಾರ್ಡ್ಗಳು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಂಗಳೂರು ಉತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಕಾರ್ ಸ್ಟ್ರೀಟ್ ಬಳಿಯ ಮನೆಯೊಂದರಲ್ಲಿ ಅಂದರ್ – ಬಾಹರ್ ಆಟವಾಡುತ್ತಿದ್ದ 8 ಮಂದಿಯನ್ನು ಬಂಧಿಸಿದ್ದಾರೆ. ನಾಗರಾಜ್, ಮನೋಜ್ ಕುಮಾರ್, ಸಮೀರ್ ಅಹಮ್ಮದ್, ಸಂತೋಷ್, ಮಂಜುನಾಥ, ಶರತ್ ಕುಮಾರ್, ಉಮ್ಮರ್ ಫಾರೂಕ್, ಅಶೋಕ್ ಡಿ’ಸೋಜಾ, ನವೀನ್ ಅಂಗಡಿ, ಕಿಶನ್, ನೀಲಪ್ಪ ಮಿಟಿ, ಅಪ್ಸರ್ ಬಂಧಿತರು. 33,120 ರೂ. ನಗದು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ. ನೇತೃತ್ವದಲ್ಲಿ ಪಿಎಸ್ಐ ನರೇಂದ್ರ, ಶರಣಪ್ಪ ಭಂಡಾರಿ, ಎಎಸ್ಐ ರಾಮ ಪೂಜಾರಿ, ಸುಜನ್ ಶೆಟ್ಟಿ ಹಾಗೂ ಸಿಸಿಬಿ ಸಿಬಂದಿ ದಾಳಿ ನಡೆಸಿದ್ದಾರೆ.