ಮಂಗಳೂರು : ಮಾದಕ ವಸ್ತು ಸೇವನೆ ಆರೋಪ; ಇಬ್ಬರ ಸೆರೆ

ಮಂಗಳೂರು : ಮಾದಕ ವಸ್ತು ಸೇವನೆ ಆರೋಪ; ಇಬ್ಬರ ಸೆರೆ

ಮಂಗಳೂರು : ನಗರದ ಬಿಜೈ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್‌ನಲ್ಲಿ ಮಾದಕ ವಸ್ತುವನ್ನು ಬೆರೆಸಿ ಸೇದುತ್ತಿದ್ದ ಆರೋಪದ ಮೇರೆಗೆ ಬರ್ಕೆ ಠಾಣೆಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಿಜೈ ಆನೆಗುಂಡಿ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಸಿಗರೇಟು ಸೇದುತ್ತಿದ್ದ ಕೇರಳ ಕೋಯಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿ ನಿವಾಸಿ ಶಾಮಿಲ್ (21) ಹಾಗೂ ಬಿಜೈ ನ್ಯೂ ರೋಡ್‌ ಬಳಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಸಿಗರೇಟು ಸೇದುತ್ತಿದ್ದ ಮಲಪ್ಪುರ ಜಿಲ್ಲೆಯ ಪೆರುಂಪಡಪ್ಪು ನಿವಾಸಿ ಸಫ್ಘಾನ್ (22)ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದರು. ಬಳಿಕ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವನೆ ದೃಢಪಟ್ಟಿದೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯ