ಯಶಸ್ವಿಯಾಗಿ ನಡೆದ ಭಾರತೀಯ ನೌಕಾಪಡೆ ಮುಖ್ಯಸ್ಥರ ಸಮ್ಮೇಳನ – 2025

ಯಶಸ್ವಿಯಾಗಿ ನಡೆದ ಭಾರತೀಯ ನೌಕಾಪಡೆ ಮುಖ್ಯಸ್ಥರ ಸಮ್ಮೇಳನ – 2025

ನವದೆಹಲಿ: ಭಾರತೀಯ ನೌಕಾಪಡೆಯ ಮುಖ್ಯಸ್ಥರ ಸಮ್ಮೇಳನ 2025 ಫೆಬ್ರವರಿ 8 ರಿಂದ 9, 2025 ರವರೆಗೆ  ನವದೆಹಲಿಯ ನೌಕಾ ಕೇಂದ್ರದಲ್ಲಿ  ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ 8 ಮಂದಿ ಮಾಜಿ ನೌಕಾಪಡೆ ಮುಖ್ಯಸ್ಥರು ಮತ್ತು ಈಗಿನ ನೌಕಾಪಡೆ ಮುಖ್ಯಸ್ಥರು ಭಾಗವಹಿಸಿದ್ದರು. ಅವರು ಭಾರತದ ಭವಿಷ್ಯದ ಸಮುದ್ರ ಶಕ್ತಿಯನ್ನು ರೂಪಿಸುವ ನಿಟ್ಟಿನಲ್ಲಿ ಎದುರಾಗುವ ಪ್ರಮುಖ ಸಮಸ್ಯೆಗಳು, ತಂತ್ರಜ್ಞಾನ ಮತ್ತು ನೀತಿಗಳ ಬಗ್ಗೆ ಚರ್ಚಿಸುವ ಉದ್ದೇಶದಿಂದ ಒಟ್ಟು ಸೇರಿದ್ದರು.

ಭವಿಷ್ಯದ ತಂತ್ರಗಳಿಗೆ ನಾಯಕತ್ವ ಜ್ಞಾನದ ಬಳಕೆ

ಮಾಜಿ ನೌಕಾಪಡೆ ಮುಖ್ಯಸ್ಥರ ಅಪಾರ ಅನುಭವ ಮತ್ತು ಪರಿಪಕ್ವತೆಯನ್ನು ಉಪಯೋಗಿಸುವುದರೊಂದಿಗೆ, ಹೊಸ ತಂತ್ರಜ್ಞಾನ, ಕಾರ್ಯಾಚರಣೆ ತಂತ್ರಗಳು, ನೀತಿಗಳ ಅಭಿವೃದ್ದಿ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗಿತ್ತು.

ಫೆಬ್ರವರಿ 8 ರಂದು, ನವದೆಹಲಿಯ ಹೊಸ ನೌಸೇನಾ ಭವನದಲ್ಲಿ ಅಧಿಕೃತ ಮಾಹಿತಿ ಸಮ್ಮೇಳನವನ್ನು ಆಯೋಜಿಸಲಾಯಿತು. ಈ ವೇಳೆ ಮಾಜಿ ನೌಕಾಪಡೆ ಮುಖ್ಯಸ್ಥರಿಗೆ ನೌಕಾಪಡೆಯ ಇತ್ತೀಚಿನ ಅಭಿವೃದ್ಧಿಗಳು, ತಂತ್ರಜ್ಞಾನ, ನೀತಿಗಳ ಪರಿವೀಕ್ಷಣೆ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು.

ಇದರ ಜೊತೆಗೆ, “ಮಂಥನ್” ಎಂಬ ಹೆಸರಿನ ವಿಶೇಷ ಅಧಿವೇಶನವನ್ನು ಆಯೋಜಿಸಲಾಯಿತು. ಅದರಲ್ಲಿ ಭವಿಷ್ಯದ ಸಮುದ್ರ ಯುದ್ಧ, ಭೂ – ರಾಜಕೀಯ ಸವಾಲುಗಳು ಮತ್ತು ಮಾನವ ಸಂಪತ್ತು ನಿರ್ವಹಣೆ ಕುರಿತು ಗಂಭೀರ ಚರ್ಚೆ ನಡೆಯಿತು. ಈ ಸಂವಾದವು ಭಾರತದ ನೌಕಾಬಲವನ್ನು ಮತ್ತಷ್ಟು ಪ್ರಬಲವಾಗಿಸುವ ದಿಟ್ಟ ತಂತ್ರಗಳನ್ನು ರೂಪಿಸುವ ವೇದಿಕೆಯನ್ನು ನೀಡಿತು.

ಲೆಗೆಸಿ ಆಫ್ ಲೀಡರ್‌ಶಿಪ್(ನಾಯಕತ್ವದ ಪರಂಪರೆ) ಪುಸ್ತಕ ಬಿಡುಗಡೆ:

ಈ ಸಮ್ಮೇಳನದ ಮುಖ್ಯ ಆಕರ್ಷಣೆ ಲೆಗೆಸಿ ಆಫ್ ಲೀಡರ್‌ಶಿಪ್: ನೇವಲ್ ಚೀಫ್ಸ್ ಥ್ರೂ ಟೈಮ್ (ನಾಯಕತ್ವದ ಪರಂಪರೆ: ಕಾಲ-ಕಾಲದ ನೌಕಾ ಮುಖ್ಯಸ್ಥರು) ಎಂಬ ಹೆಸರಿನ ಸಂಕಲನ ಪುಸ್ತಕದ ಬಿಡುಗಡೆ. ಇದರಲ್ಲಿ ಮಾಜಿ ನೌಕಾ ಮುಖ್ಯಸ್ಥರ ಜೀವನಯಾನ, ಅಪರೂಪದ ಚಿತ್ರಗಳು, ವೈಯಕ್ತಿಕ ಅನುಭವಗಳು ಹಾಗೂ ಅವರ ನಾಯಕತ್ವದ ಪ್ರಭಾವ ಸೇರಿದಂತೆ ಅನೇಕ ಪ್ರಭಾವಶಾಲಿ ಸಂಗತಿಗಳಿವೆ. ಈ ಪುಸ್ತಕವು ಭಾರತೀಯ ನೌಕಾಪಡೆಯ ಪರಿವರ್ತನೆಯನ್ನೂ, ಅದರ ಶ್ರೇಷ್ಠ ಮುಖ್ಯಸ್ಥರ ಕೊಡುಗೆಗಳನ್ನೂ ಪ್ರಸ್ತುತಪಡಿಸುತ್ತದೆ. ಇದು ನೌಕಾಪಡೆಯ ಬೆಳವಣಿಗೆಯಲ್ಲಿ ಅವರ ಪಾತ್ರದ ಮಹತ್ವವನ್ನು ಒತ್ತಿಹೇಳುವ ಒಂದು ಗೌರವಾರ್ಪಣೆ.

ರಾಷ್ಟ್ರಕ್ಕಾಗಿ ಮಡಿದ ವೀರ ಯೋಧರಿಗೆ ಗೌರವಾರ್ಪಣೆ

ಮಾಜಿ ನೌಕಾಪಡೆ ಮುಖ್ಯಸ್ಥರು ಭಾರತದ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಪುಷ್ಪ ನಮನ ಸಲ್ಲಿಸಿದರು. ಈ ಸಮಾರಂಭವು ಭಾರತೀಯ ನೌಕಾಪಡೆಯ ಹುತಾತ್ಮ ಯೋಧರ ತ್ಯಾಗವನ್ನು ಸ್ಮರಿಸುವ ಒಂದು ಮಹತ್ವದ  ಕ್ಷಣವಾಯಿತು.

ಭಾರತೀಯ ನೌಕಾಪಡೆಯ ಭವಿಷ್ಯದ ದೃಷ್ಟಿಕೋನ

ನೌಕಾಪಡೆಯ ಪ್ರಸ್ತುತ ಮುಖ್ಯಸ್ಥರು, ನೌಕಾಪಡೆಯು ತನ್ನ ಐತಿಹಾಸಿಕ ಪರಂಪರೆಯನ್ನು ಮುಂದುವರಿಸಲು ಮತ್ತು ತಂತ್ರಜ್ಞಾನ ಹಾಗೂ ತಾಂತ್ರಿಕ ಅಭಿವೃದ್ಧಿಯನ್ನು ಸ್ವೀಕರಿಸಲು ಬದ್ಧವಾಗಿದೆ ಎಂದು ಪುನರುಚ್ಚರಿಸಿದರು. ತಮ್ಮ ಪ್ರಸ್ತಾವನೆಯಲ್ಲಿ ಅವರು, “ನಿಮ್ಮ ದಿಗ್ಗಜ ಪರಂಪರೆಯನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ. ಭಾರತೀಯ ನೌಕಾಪಡೆ ಯಾವಾಗಲೂ, ಎಲ್ಲಾ ಕಡೆಯಲ್ಲಿಯೂ, ಎಲ್ಲಾ ರೀತಿಯಲ್ಲೂ ಭಾರತದ ಸಾಮುದ್ರಿಕ ಹಿತಾಸಕ್ತಿಗಳನ್ನು ರಕ್ಷಿಸಲು ಸಿದ್ಧವಾಗಿದೆ.”  ಎಂದರು.

ನೌಕಾ ಮುಖ್ಯಸ್ಥರ ಸಮ್ಮೇಳನ 2025, ಭಾರತೀಯ ನೌಕಾಪಡೆಯ ಸ್ಥಿರತೆಯನ್ನು ಖಚಿತಪಡಿಸುವ ಮತ್ತು ಹೊಸ ಆವಿಷ್ಕಾರಗಳಿಗೆ ಅನುವು ಮಾಡಿಕೊಡುವ ಪ್ರಮುಖ ಹಂತವಾಗಿದೆ. ಭಾರತದ ಭವಿಷ್ಯದ ಸಮುದ್ರ ರಕ್ಷಣಾ ಶಕ್ತಿ ಹೆಚ್ಚಾಗುವುದರ ಮತ್ತು ಆತ್ಮ ನಿರ್ಭರರಾಗುವ ಪ್ರಮುಖ ಹಂತ ಎಂದು ಪರಿಗಣಿಸಲಾಗಿದೆ.

ರಾಷ್ಟ್ರೀಯ