ಪಂಡಿತ್ ದೀನದಯಾಳ್ ಉಪಾಧ್ಯಾಯರ 57ನೇ ಪುಣ್ಯತಿಥಿ – ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ 

ಪಂಡಿತ್ ದೀನದಯಾಳ್ ಉಪಾಧ್ಯಾಯರ 57ನೇ ಪುಣ್ಯತಿಥಿ – ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ 

ಇಂದು ಪಂಡಿತ್ ದೀನದಯಾಳ್ ಉಪಾಧ್ಯಾಯರ 57ನೇ ಪುಣ್ಯತಿಥಿ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಂಡಿತ ದೀನದಯಾಳ್ ಉಪಾಧ್ಯಾಯರಿಗೆ ಗೌರವ ನಮನ ಸಲ್ಲಿಸಿದರು. ಅವರ ನಾಡಿಗಾಗಿ ಮಾಡಿದ ಸೇವೆಯನ್ನ ಮನಪೂರ್ವಕ ಗೌರವಿಸಿದ್ದಾರೆ.

ಸಾಮಾಜಿಕ ಮಾಧ್ಯಮ X ನಲ್ಲಿ, ಪ್ರಧಾನಿ ಮೋದಿ ಅವರು ಉಪಾಧ್ಯಾಯರ ತತ್ತ್ವವನ್ನು ಸ್ಮರಿಸುತ್ತಾ, “ಸಮಾಜದ ಅತ್ಯಂತ ಬಡ ವ್ಯಕ್ತಿ ಜೀವನದಲ್ಲಿ ಮುಂದೆ ಬಂದಾಗ ನಮ್ಮ ದೇಶ ಅಬಿವೃದ್ದಿಯಾದಂತೆ ಎಂಬ ಮಾತು” ನಮಗೆ ಪ್ರೇರಣೆ ಎಂದಿದ್ದಾರೆ. ಅವರ ತ್ಯಾಗ ಮತ್ತು ಆದರ್ಶಗಳು ಭಾರತದ ಪ್ರಗತಿ ಮತ್ತು ಏಕತೆಗೆ ಒಂದು ಮಾರ್ಗದರ್ಶಕ ಶಕ್ತಿ ಎಂದು ಅವರು ಉಲ್ಲೇಖಿಸಿದರು.

ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ಫೆಬ್ರವರಿ 11, 1968 ರಂದು ದೈವಾಧೀನರಾದರು. ಆಗ ಅವರಿಗೆ 51 ವರ್ಷ ವಯಸ್ಸಾಗಿತ್ತು.

ಪಂಡಿತರು ದೂರದೃಷ್ಟಿಯ ನಾಯಕರಾಗಿದ್ದು, ಅಖಂಡ ಮಾನವತಾವಾದ ತತ್ವವನ್ನು ಪರಿಚಯಿಸಿದರು. ಈ ತತ್ವಗಳು ಭಾರತದ ಸಾಂಸ್ಕೃತಿಕ ಮೌಲ್ಯಗಳ ಆಧಾರದ ಮೇಲೆ ಸಮತೋಲಿತ ಅಭಿವೃದ್ಧಿಯನ್ನು ಒತ್ತಿಹೇಳುತ್ತದೆ. ಅವರು ಅಂತ್ಯೋದಯ ತತ್ತ್ವವನ್ನು ಬೆಂಬಲಿಸಿ, ಸಮಾಜದ ಹಿಂದುಳಿದ ವರ್ಗಗಳ ಏಳಿಗೆಗಾಗಿ ಕೆಲಸ ಮಾಡಿದರು ಮತ್ತು ಸ್ವದೇಶಿ ನೀತಿಯನ್ನು ಪ್ರಚಾರ ಮಾಡಿ ಆತ್ಮನಿರ್ಭರತೆಯನ್ನು ಉತ್ತೇಜಿಸಿದರು. ಭಾರತೀಯ ಜನಸಂಘದ  ಪ್ರಮುಖ ನಾಯಕರಾಗಿ, ಅವರು ರಾಷ್ಟ್ರಪ್ರೇಮ ಮತ್ತು ಸ್ವಾವಲಂಬನೆಯ ಚಿಂತನೆಗಳನ್ನು ರೂಪಿಸಿದರು. ಅವರ ತತ್ತ್ವಗಳು ಇಂದಿಗೂ ಭಾರತೀಯ ಆಡಳಿತ ಮತ್ತು ನೀತಿಗಳನ್ನು ಪ್ರಭಾವಿತಗೊಳಿಸುತ್ತಿವೆ.

ರಾಷ್ಟ್ರೀಯ