ಮಹಾಕುಂಭಮೇಳ 2025 ಕ್ಕೆ 45,000 ಟನ್ ಉಕ್ಕು ಪೂರೈಕೆ ಮಾಡಿದ SAIL

ಮಹಾಕುಂಭಮೇಳ 2025 ಕ್ಕೆ 45,000 ಟನ್ ಉಕ್ಕು ಪೂರೈಕೆ ಮಾಡಿದ SAIL

ದೆಹಲಿ: ಉಕ್ಕು ಒಂದು ನಿಯಂತ್ರಣ- ಮುಕ್ತ ವಲಯವಾಗಿದ್ದು, ದೇಶದಲ್ಲಿ ಉಕ್ಕು ಉತ್ಪಾದನೆ, ಬಳಕೆ ಮತ್ತು ಉಕ್ಕಿನ ಕ್ಷೇತ್ರದ ದಕ್ಷತೆಯನ್ನು ಸುಧಾರಿಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ನೀತಿ ಮಾರ್ಗಸೂಚಿಗಳನ್ನು ರೂಪಿಸುವುದು ಮತ್ತು ಸಾಂಸ್ಥಿಕ ಕಾರ್ಯವಿಧಾನ ಸ್ಥಾಪಿಸುವ ಮೂಲಕ ಉಕ್ಕಿನ ಉದ್ಯಮಕ್ಕೆ ಅನುಕೂಲ ಮಾಡಿಕೊಡುವುದು ಸರ್ಕಾರದ ಪಾತ್ರವಾಗಿದೆ. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ನಲ್ಲಿ ತನ್ನ ಉಕ್ಕಿನ ಸ್ಥಾವರಗಳು ಉತ್ಪಾದಿಸುವ ಕಾರ್ಬನ್, ಮಿಶ್ರಲೋಹ ಮತ್ತು ವಿಶಿಷ್ಟ ಉಕ್ಕಿನ ಉತ್ಪನ್ನಗಳ ಮಾರಾಟಕ್ಕೆ ಮೀಸಲಾದ ಮಾರುಕಟ್ಟೆ ವ್ಯವಸ್ಥೆ ಇದೆ. ಸಚಿವಾಲಯದ ಆಡಳಿತ ನಿಯಂತ್ರಣದಲ್ಲಿರುವ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು (CPSEಗಳು) ದೇಶಾದ್ಯಂತದ ಅನುಭವೀ ಮತ್ತು ಅನುಭವವಿಲ್ಲದ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ. ಜೊತೆಗೆ, ಅವರಿಗೆ ಬೇಕಾದ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ಒದಗಿಸುತ್ತವೆ.

ಪ್ರಸ್ತುತ ಉತ್ತರಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳ 2025 ಕ್ಕೆ SAIL ಸುಮಾರು 45,000 ಟನ್ ಉಕ್ಕನ್ನು ಲೋಕೋಪಯೋಗಿ ಇಲಾಖೆ (PWD), ಉತ್ತರ ಪ್ರದೇಶ ರಾಜ್ಯ ಸೇತುವೆಗಳ ನಿಗಮ, ವಿದ್ಯುತ್ ಮಂಡಳಿ ಮತ್ತು ಅವುಗಳ ಪೂರೈಕೆದಾರರಿಗೆ ನೀಡಿದೆ ಎಂದು ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವ ಶ್ರೀ ಭೂಪತಿರಾಜು ಶ್ರೀನಿವಾಸ ವರ್ಮಾ ಅವರು ಇಂದು ಲೋಕಸಭೆಗೆ ತಿಳಿಸಿದ್ದಾರೆ.

ರಾಷ್ಟ್ರೀಯ