
ಚಿತ್ತೌರ್‌ಗಢ: ಉಪರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನ್ಖರ್ ಅವರು ಕೃಷಿಕರನ್ನು ಪೋಷಕರು ಎಂದು ವರ್ಣಿಸಿ, ಅವರು ಯಾರ ಮೇಲೂ ಅವಲಂಬಿತರಾಗಬಾರದು ಎಂದು ಸಲಹೆ ನೀಡಿದರು. ಚಿತ್ತೌರ್‌ಗಢದಲ್ಲಿ ನಡೆದ ಅಖಿಲ ಮೇವಾರ್ ಪ್ರಾದೇಶಿಕ ಜಾಠ್ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ಕೃಷಿಕರ ಆರ್ಥಿಕ ಪರಿಸ್ಥಿತಿ ಸುಧಾರಿಸಿದಾಗ ದೇಶದ ಪರಿಸ್ಥಿತಿಯೂ ಸುಧಾರಿಸುತ್ತದೆ. ಕೃಷಿಕರು ಪೋಷಕರು, ಅವರನ್ನು ಯಾರೂ ನಿರೀಕ್ಷಿಸಬಾರದು, ಅವರು ಯಾರ ಮೇಲೂ ಅವಲಂಬಿತರಾಗಬಾರದು. ಅವರಿಗೆ ತಮ್ಮದೇ ಆದ ರಾಜಕೀಯ ಮತ್ತು ಆರ್ಥಿಕ ಸಾಮರ್ಥ್ಯವಿದೆ” ಎಂದಿದ್ದಾರೆ.

“ಯಾವುದೇ ಅಡಚಣೆಗಳು ಬಂದರೂ, ಏನೇ ಸಂಭವಿಸಿದರೂ, ಭಾರತದ ಅಭಿವೃದ್ಧಿ ಪಥದಲ್ಲಿ ಕೃಷಿಕರ ಪಾತ್ರವನ್ನು ಯಾರೂ ಕಡೆಗಣಿಸುವಂತಿಲ್ಲ. ಇಂದಿನ ಆಡಳಿತ ವ್ಯವಸ್ಥೆ ಕೃಷಿಕರ ಮುಂದೆ ಶಿರಬಾಗುತ್ತದೆ,“ ಎಂದು ಅವರು ಪ್ರಬಲವಾಗಿ ಹೇಳಿದರು.
ಜಾಠ್ ಮೀಸಲಾತಿ ಹೋರಾಟವನ್ನು ನೆನೆದ ರಾಷ್ಟ್ರಪತಿಗಳು
25 ವರ್ಷಗಳ ಹಿಂದೆ ನಡೆದ ಜಾಟ್ ಮೀಸಲಾತಿ ಹೋರಾಟವನ್ನು ಸ್ಮರಿಸಿದ ಅವರು, “ನಾನು 25 ವರ್ಷಗಳ ನಂತರ ಇಲ್ಲಿ ಬಂದು ನಿಂತಿದ್ದೇನೆ. 1999ರಲ್ಲಿ ಜಾತ್ಯಾತೀತ ನ್ಯಾಯಕ್ಕಾಗಿ ಹೋರಾಟ ಆರಂಭವಾಯಿತು, ಮತ್ತು ಜಾಟ್ ಸಮುದಾಯದ ಜೊತೆಗೆ ಇತರ ಕೆಲವು ಜಾತಿಗೂ ಮೀಸಲಾತಿ ದೊರೆಯುವಂತಾಯಿತು. ನಾವು ಈ ಪವಿತ್ರ ಭೂಮಿಯಲ್ಲೇ ಈ ಹೋರಾಟದ ಬೀಜವನ್ನು ಬಿತ್ತಿದ್ದೆವು, ಅದನ್ನು ಯಶಸ್ವಿಯಾಗಿ ಬೆಳೆಸಿದೆವು. ಇಂದು ಅದರ ಫಲಗಳು ದೇಶದ ಆಡಳಿತ ವ್ಯವಸ್ಥೆಯಲ್ಲಿ ಗೋಚರಿಸುತ್ತಿವೆ” ಎಂದರು.
“ಮೀಸಲಾತಿ ಹೋರಾಟ ಎಂದರೆ ಜನರು ಭಯಭೀತರಾಗುತ್ತಾರೆ, ಹಿಂಸಾತ್ಮಕವಾಗಿ ವರ್ತಿಸುತ್ತಾರೆ. ಆದರೆ ನಮ್ಮ ಹೋರಾಟ ಶಾಂತಿಯುತವಾಗಿ ನಡೆಯಿತು, ಇದನ್ನು ಜಗತ್ತಿನ ಶ್ರೇಷ್ಠ ಉದಾಹರಣೆಯಾಗಿ ಪರಿಗಣಿಸಬಹುದು,” ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡರು.
ಕೃಷಿ ವಿಜ್ಞಾನ ಕೇಂದ್ರಗಳ ಮಹತ್ವ
ಕೃಷಿಕರು ಕೃಷಿ ವಿಜ್ಞಾನ ಕೇಂದ್ರಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದ ಮಾನ್ಯ ಉಪರಾಷ್ಟ್ರಪತಿಗಳು, “730ಕ್ಕೂ ಹೆಚ್ಚು ಕೃಷಿ ವಿಜ್ಞಾನ ಕೇಂದ್ರಗಳು ಕೃಷಿಕರಿಗಾಗಿ ಕಾರ್ಯನಿರ್ವಹಿಸುತ್ತಿವೆ. ಅವುಗಳನ್ನು ನಿರ್ಲಕ್ಷಿಸಬೇಡಿ, ಹೋಗಿ ಮಾಹಿತಿ ಪಡೆದುಕೊಳ್ಳಿ. ಸರಕಾರ ನಿಮಗಾಗಿ ಅನೇಕ ಯೋಜನೆಗಳನ್ನು ತಂದಿದೆ, ನೀವು ಅವುಗಳ ಬಗ್ಗೆ ಅರಿತಿಲ್ಲ. ಸಹಕಾರ ಸಂಘಗಳು ನಿಮಗೆ ಏನೆಲ್ಲಾ ನೆರವಾಗಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಿ .” ಎಂದು ಕಿವಿಮಾತು ಹೇಳಿದ್ದಾರೆ.
“ನೀವು ತಿಂಗಳಲ್ಲಿ ಕೇವಲ ಎರಡು ಬಾರಿ ಕೃಷಿ ವಿಜ್ಞಾನ ಕೇಂದ್ರಗಳಿಗೆ ಭೇಟಿ ನೀಡಿದರೂ, ಅಲ್ಲಿನ ಸಿಬ್ಬಂದಿ ಎಚ್ಚೆತ್ತುಕೊಳ್ಳುತ್ತಾರೆ, ಗುಣಮಟ್ಟ ಸುಧಾರಣೆಯಾಗುತ್ತದೆ” ಎಂದು ಅವರು ತಿಳಿಸಿದರು.
ಬೆಳೆ ಮೌಲ್ಯವರ್ಧನೆಯಲ್ಲಿ ಕೃಷಿಕರ ಪಾತ್ರ
ಕೃಷಿಕರು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆ ಮಾಡಬೇಕು ಎಂದು ಅಭಿಪ್ರಾಯಪಟ್ಟ ಅವರು, “ಅನೇಕ ಉದ್ಯಮಗಳು ಕೃಷಿ ಉತ್ಪನ್ನಗಳ ಮೇಲೆ ಅವಲಂಬಿತವಾಗಿವೆ. ಹಿಟ್ಟಿನ ಗಿರಣಿಗಳು, ಎಣ್ಣೆ ಗಿರಣಿಗಳು ಮುಂತಾದವುಗಳಲ್ಲಿ ಕೃಷಿಕರು ಪಾಲ್ಗೊಳ್ಳಬೇಕು. ಪಶುಸಂಗೋಪನೆಯನ್ನು ಉತ್ತೇಜಿಸಬೇಕು. ಹಾಲು ಉತ್ಪಾದನೆಯ ಜೊತೆಗೆ ಬೇರೆ ಹಾಲು ಉತ್ಪನ್ನಗಳಾದ ಮಜ್ಜಿಗೆ, ಮೊಸರು, ಪನೀರ್, ಐಸ್ ಕ್ರೀಮ್, ರಸಗುಲ್ಲಾ ಮುಂತಾದವುಗಳ ಉತ್ಪಾದನೆಯಲ್ಲಿ ಕೃಷಿಕರು ಸಹಭಾಗಿಯಾಗಬೇಕು.”
ಯುವಕರಿಗೆ ಕೃಷಿ ಉದ್ಯಮದಲ್ಲಿ ತೊಡಗಿಸಿಕೊಳ್ಳುವಂತೆ ಕರೆ
“ನನ್ನ ವಿನಂತಿ ಕೃಷಿಕರಿಗೆ ಮತ್ತು ಅವರ ಮಕ್ಕಳಿಗೆ – ಕೃಷಿ ಉತ್ಪಾದನೆ ಜಗತ್ತಿನ ಅತ್ಯಂತ ಅಮೂಲ್ಯ ಉದ್ಯಮ. ಆದರೆ, ಕೃಷಿಕರು ತಮ್ಮ ಉತ್ಪನ್ನಗಳ ವ್ಯಾಪಾರದಲ್ಲಿ ಭಾಗವಹಿಸುವುದಿಲ್ಲ. ಇದನ್ನು ಬದಲಾಯಿಸಬೇಕು. ನಮ್ಮ ಯುವಕರು ಪ್ರತಿಭಾವಂತರಾಗಿದ್ದಾರೆ ಎಂದರು. ಮುಂದೆ ಮಾತನಾಡಿದ ಅವರು, ನನ್ನ ಲವಲೇಶವೂ ಇಲ್ಲದ ಒಂದು ಬಿನ್ನಹ – ಹೆಚ್ಚಿನ ಕೃಷಿಕರು ಸಹಕಾರ ಸಂಘಗಳಲ್ಲಿ ಸೇರಿ ಕೃಷಿ ಸಂಬಂಧಿತ ಉದ್ಯಮಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ದೀರ್ಘಾವಧಿಯಲ್ಲಿ ಉತ್ತಮ ಆರ್ಥಿಕ ಲಾಭ ಸಿಗುತ್ತದೆ,” ಎಂದು ಸಲಹೆ ನೀಡಿದರು.