38ನೇ ರಾಷ್ಟ್ರೀಯ ಕ್ರೀಡಾಕೂಟ 2025: ಉತ್ತರಾಖಂಡದಲ್ಲಿ ಭವ್ಯ ಕ್ರೀಡಾ ಹಬ್ಬ

38ನೇ ರಾಷ್ಟ್ರೀಯ ಕ್ರೀಡಾಕೂಟ 2025: ಉತ್ತರಾಖಂಡದಲ್ಲಿ ಭವ್ಯ ಕ್ರೀಡಾ ಹಬ್ಬ

ದೆಹರಾಡೂನ್: 38ನೇ ರಾಷ್ಟ್ರೀಯ ಕ್ರೀಡಾಕೂಟವು ಈ ವರ್ಷ ಉತ್ತರಾಖಂಡದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ. ಜನವರಿ 28ರಂದು ಉದ್ಘಾಟನೆಗೊಂಡ ಈ ಕ್ರೀಡಾ ಹಬ್ಬ ಫೆಬ್ರವರಿ 14 ರವರೆಗೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು ದೆಹರಾಡೂನಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಈ ಕ್ರೀಡಾಕೂಟವನ್ನು ಉದ್ಘಾಟಿಸಿದರು.

ಈ ಕ್ರೀಡಾಕೂಟದಲ್ಲಿ 37 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸುಮಾರು 10,000 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಆತಿಥೇಯ ರಾಜ್ಯ ಉತ್ತರಾಖಂಡದಿಂದ ಅತ್ಯಧಿಕ ಅಂದರೆ 1,012 ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಕ್ರೀಡಾ ಸ್ಪರ್ಧೆಗಳು ದೆಹರಾಡೂನ್, ಹರಿದ್ವಾರ್, ಶಿವಪುರಿ, ತಿಹ್ರಿ, ನೈನಿತಾಲ್, ಹಳ್ದ್ವಾನಿ ಮತ್ತು ರುದ್ರಪುರ ಮೊದಲಾದ ನಗರಗಳಲ್ಲಿ ಆಯೋಜಿಸಲಾಗಿದೆ.

ಈ ಕ್ರೀಡಾಕೂಟದ ಮೂಲಮಂತ್ರ “ಸಂಕಲ್ಪದಿಂದ ಶಿಖರದವರೆಗೆ”. ಇದು ಪಾಲ್ಗೊಳ್ಳುವ ಕ್ರೀಡಾಪಟುಗಳ ದೃಢ ನಿಶ್ಚಯವನ್ನು ತಿಳಿಸುತ್ತದೆ.

38ನೇ ರಾಷ್ಟ್ರೀಯ ಕ್ರೀಡಾಕೂಟದ ರಾಜ್ಯವಾರು  ಪದಕ ಪಟ್ಟಿಯ ವಿವರ ಈ ಕೆಳಗಿನಂತಿದೆ;

ಸ್ಥಾನರಾಜ್ಯಗಳುಚಿನ್ನಬೆಳ್ಳಿಕಂಚುಒಟ್ಟು
1ಕರ್ನಾಟಕ28111554
2ಸೇವಾ ಕ್ರೀಡಾ ನಿಯಂತ್ರಣ ಮಂಡಳಿ2710946
3ಮಧ್ಯಪ್ರದೇಶ1771034
4ಮಹಾರಾಷ್ಟ್ರ16353182
5ಹರಿಯಾಣ12192051
6ತಮಿಳುನಾಡು11161744
7ಮಣಿಪುರ1110728
8ದೆಹಲಿ9101029
9ಕೇರಳ99624
10ಪಂಜಾಬ್791632
11ರಾಜಸ್ಥಾನ741526
12ಉತ್ತರ ಪ್ರದೇಶ66618
13ಪಶ್ಚಿಮ ಬಂಗಾಳ65819
14ಒಡಿಶಾ56920
15ಉತ್ತರಾಖಂಡ್4141533
16ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು4127
17ಝಾರ್ಖಂಡ್33410
18ಆಂಧ್ರಪ್ರದೇಶ3148
19ಛತ್ತೀಸ್‌ಗಡ3058
20ಜಮ್ಮು ಮತ್ತು ಕಾಶ್ಮೀರ2248
21ಅರುಣಾಚಲ ಪ್ರದೇಶ2237
22ಚಂಡೀಗಢ2215
23ಗೋವಾ2002
24ಗುಜರಾತ್13812
25ತೆಲಂಗಾಣ1034
26ಹಿಮಾಚಲ ಪ್ರದೇಶ1012
27ಅಸ್ಸಾಂ012820
28ಬಿಹಾರ0325
29ಮೆಘಾಲಯ0123
30ಮಿಜೋರಾಂ0011
ರಾಷ್ಟ್ರೀಯ