ಮಲೇರಿಯಾ – ಮುಕ್ತ ರಾಷ್ಟ್ರವಾದ ಜಾರ್ಜಿಯಾ; ಕಳೆದ 20 ವರ್ಷಗಳಲ್ಲಿ ದಾಖಲಾಗಿಲ್ಲ ಯಾವುದೇ ಪ್ರಕರಣ;

ಮಲೇರಿಯಾ – ಮುಕ್ತ ರಾಷ್ಟ್ರವಾದ ಜಾರ್ಜಿಯಾ; ಕಳೆದ 20 ವರ್ಷಗಳಲ್ಲಿ ದಾಖಲಾಗಿಲ್ಲ ಯಾವುದೇ ಪ್ರಕರಣ;

ವಿಶ್ವ ಆರೋಗ್ಯ ಸಂಸ್ಥೆ (WHO) ಜಾರ್ಜಿಯಾವನ್ನು ಅಧಿಕೃತವಾಗಿ ಮಲೇರಿಯಾ ಮುಕ್ತ ರಾಷ್ಟ್ರವೆಂದು ಪ್ರಮಾಣೀಕರಿಸಿದೆ. ಕಳೆದ ನೂರು ವರ್ಷಗಳಿಂದಲೂ ಶ್ರದ್ಧೆಯಿಂದ ಮಾಡಿದ ಪ್ರಯತ್ನದ ಫಲವಾಗಿ ಇದು ಸಾಧ್ಯವಾಗಿದೆ. ಈ ಸಾಧನೆಯೊಂದಿಗೆ, ಜಾರ್ಜಿಯಾ ಮಲೇರಿಯಾವನ್ನು ಯಶಸ್ವಿಯಾಗಿ ನಿರ್ಮೂಲನ ಮಾಡಿದ 45 ರಾಷ್ಟ್ರಗಳು ಮತ್ತು ಒಂದು ಆಡಳಿತ ಪ್ರದೇಶದ ಪೈಕಿ ಒಂದಾಗಿ ಗುರುತಿಸಲ್ಪಟ್ಟಿದೆ.

ಮಲೇರಿಯಾ ಜಾರ್ಜಿಯಾದ ಪ್ರಮುಖ ಆರೋಗ್ಯ ಸವಾಲಾಗಿತ್ತು:

  • 1920ರ ದಶಕದಲ್ಲಿ, ಪ್ಲಾಸ್ಮೋಡಿಯಂ ವಿವ್ಯಾಕ್ಸ್ ಎಂಬ ಜಾತಿಯಿಂದ 30% ಜನರು ಮಲೇರಿಯಾಗೆ ತುತ್ತಾಗಿದ್ದರು.
  • ಅನೇಕ ಮಹಾಮಾರಿ ನಿಯಂತ್ರಣ ಕಾರ್ಯಕ್ರಮಗಳು ಮತ್ತು ಪತ್ತೆಹಚ್ಚಿ ಚಿಕಿತ್ಸೆ ನೀಡುವ ಸೌಲಭ್ಯಗಳ ಅಭಿವೃದ್ಧಿಯಿಂದ 1940ರ ಹೊತ್ತಿಗೆ ಮಲೇರಿಯಾ ಪ್ರಕರಣಗಳು ಗಣನೀಯವಾಗಿ ಕಡಿಮೆಯಾದವು.
  • ಆದರೆ, ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಜನರ ವಲಸೆ ಮತ್ತು ಆರೋಗ್ಯ ಸೌಲಭ್ಯಗಳ ಮೇಲೆ ಹೆಚ್ಚಿದ ಒತ್ತಡದಿಂದ ಮಲೇರಿಯಾ ಪುನಃ ಹರಡಿತು.
  • ಯುದ್ಧದ ಬಳಿಕ ಸಮಗ್ರ ಆರೋಗ್ಯ ಕಾರ್ಯಾಚರಣೆಗಳಿಂದ 1970ರ ವೇಳೆಗೆ ಜಾರ್ಜಿಯಾದಲ್ಲಿ ಮಲೇರಿಯಾ ಹರಡುವಿಕೆ ಸಂಪೂರ್ಣವಾಗಿ ನಿಲ್ಲಿಸಲಾಯಿತು.

ಮತ್ತೊಮ್ಮೆ ಕಾಣಿಸಿಕೊಂಡ ಮಲೇರಿಯಾ:

  • ಜಾರ್ಜಿಯ 25 ವರ್ಷಗಳ ಕಾಲ ಮಲೇರಿಯಾ ಮುಕ್ತವಾಗಿದ್ದರೂ, 2002ರಲ್ಲಿ 474 ಪ್ರಕರಣಗಳು ವರದಿಯಾದವು.
  • ನೂತನ ಬದ್ಧತೆಗಳು ಮತ್ತು ಸತತ ಪ್ರಯತ್ನಗಳಿಂದ  2009ರ ಹೊತ್ತಿಗೆ ಕೊನೆಯ ಮಲೇರಿಯಾ ಪ್ರಕರಣವು ವರದಿಯಾಯಿತು.
  • 2015ರ ವೇಳೆಗೆ WHO ನ ಯುರೋಪ್ ಪ್ರದೇಶದಲ್ಲಿರುವ 53 ದೇಶಗಳಲ್ಲೂ ಮಲೇರಿಯಾದ ಒಂದು ಪ್ರಕರಣವೂ ವರದಿಯಾಗದೇ, ಸಂಪೂರ್ಣವಾಗಿ ನಿರ್ಮೂಲನೆಯಾಯಿತು.

2024 ರಲ್ಲಿ, ಜಾರ್ಜಿಯಾದ ಮಲೇರಿಯಾ ಮುಕ್ತ ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ, ಸ್ವತಂತ್ರ WHO ಸಲಹಾ ಸಂಸ್ಥೆಯು ದೇಶದ ಉತ್ತಮವಾಗಿ ಕಾರ್ಯನಿರ್ವಹಿಸುವ ಆರೋಗ್ಯ ಪದ್ಧತಿ, ಬಲವಾದ ಸಾರ್ವಜನಿಕ-ಖಾಸಗಿ ಸಹಕಾರ ಮತ್ತು ಅದರ ಮಲೇರಿಯಾ ಮುಕ್ತ ಸ್ಥಾನಮಾನವನ್ನು ಕಾಪಾಡಿಕೊಳ್ಳಲು ಅನುಸರಿಸಿದ ರಾಜಕೀಯ ಬದ್ಧತೆಯನ್ನು ಗಮನಿಸಿತು.

WHO ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಮಲೇರಿಯಾ ನಿರ್ಮೂಲನೆಯ ಬಗೆಗೆ ಇದ್ದ ಬದ್ಧತೆ ಮತ್ತು ಅನುಸರಣೆಗೆ ಯೋಗ್ಯವಾದ ಕ್ರಮಗಳಿಗಾಗಿ ಜಾರ್ಜಿಯಾದ ಜನರನ್ನು ಅಭಿನಂದಿಸಿದರು. ಅವರು ಜಾರ್ಜಿಯಾದ ಬದ್ಧತೆ ಮತ್ತು ಯಶಸ್ಸು ಮಲೇರಿಯಾ ಮುಕ್ತ ಜಗತ್ತು ಸಾಧ್ಯ ಎಂಬ ಭರವಸೆಯನ್ನು ನೀಡುತ್ತದೆ ಎಂದು ಹೇಳಿದರು.

ಈ ಪ್ರಮಾಣೀಕರಣವು ಸಾರ್ವಜನಿಕ ಆರೋಗ್ಯಕ್ಕೆ ಜಾರ್ಜಿಯಾದ ಶ್ರದ್ಧೆ ಮತ್ತು ಬದ್ಧತೆ ಸಾಕ್ಷಿಯಾಗಿದೆ ಮತ್ತು ಮಲೇರಿಯಾ ನಿರ್ಮೂಲನೆಗೆ ಶ್ರಮಿಸುತ್ತಿರುವ ಇತರ ರಾಷ್ಟ್ರಗಳಿಗೆ ಸ್ಫೂರ್ತಿಯಾಗಿದೆ.

ಅಂತರಾಷ್ಟ್ರೀಯ