
ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 21ನೇ ಆರೋಪಿಯನ್ನು ಎನ್ಐಎ ಬಂಧಿಸಿದೆ. ಬಂಧಿತನನ್ನು ಅತೀಕ್ ಅಹಮದ್ ಎಂದು ಗುರುತಿಸಲಾಗಿದೆ.

ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ 21ನೇ ಆರೋಪಿ ಈತ ಎಂದು ಎನ್ಐಎ ತಿಳಿಸಿದೆ.ಅತೀಕ್ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯ ಸದಸ್ಯ. ಜನರಲ್ಲಿ ಕೋಮುದ್ವೇಷ ಸೃಷ್ಟಿಸುವ ಪಿಎಫ್ಐ ಕಾರ್ಯಸೂಚಿಯಂತೆ ಈ ಹತ್ಯೆಗೆ ಸಂಚು ರೂಪಿಸಿದ್ದ ಮುಖ್ಯ ಆರೋಪಿ ಮುಸ್ತಾಫ ಪೈಚಾರ್ಗೆ ಅತೀಕ್ ಆಶ್ರಯ ನೀಡಿದ್ದ. ಕೃತ್ಯ ನಡೆಸಿದ ಬಳಿ ಮುಸ್ತಾಫ ಚೆನ್ನೈ ತಲುಪುವುದಕ್ಕೆ ನೆರವಾಗಿದ್ದ.
2024ರಲ್ಲಿ ಮುಸ್ತಾಫನ ಬಂಧನ ಆಗುವವರೆಗೂ, ಆತ ತಲೆ ಮರೆಸಿಕೊಳ್ಳುವುದಕ್ಕೆ ಸಹಾಯ ಮಾಡಿದ್ದ’ ಎಂದು ಎನ್ಐಎ ತಿಳಿಸಿದೆ. ಬೆಳ್ಳಾರೆಯಲ್ಲಿ 2022ರ ಜುಲೈನಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಈ ಪ್ರಕರಣದ ತನಿಖೆಯನ್ನು 2022ರ ಆಗಸ್ಟ್ನಲ್ಲಿ ಎನ್ಐಎಗೆ ಹಸ್ತಾಂತರಿಸಲಾಗಿತ್ತು. ಈ ಪ್ರಕರಣದಲ್ಲಿ ಇನ್ನೂ ಆರು ಆರೋಪಿಗಳ ಬಂಧನವಾಗಬೇಕಿದೆ.
