ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ: ಜನವರಿ 23 ರಿಂದ 26 ರವರೆಗೆ

ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ: ಜನವರಿ 23 ರಿಂದ 26 ರವರೆಗೆ

ಮಂಗಳೂರು: ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಜನವರಿ 23 ರಿಂದ 26 ರವರೆಗೆ ಗಣರಾಜ್ಯೋತ್ಸವ ಅಂಗವಾಗಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಹೂವಿನಿಂದ ತಯಾರಿಸಲಾದ 22 ಅಡಿ ಎತ್ತರದ ಐಫೆಲ್ ಟವರ್ ಮಾದರಿ ಪ್ರಮುಖ ಆಕರ್ಷಣೆಯಾಗಿದ್ದು, ವಿವಿಧ ತೋಟಗಾರಿಕೆ ಉತ್ಪನ್ನಗಳನ್ನು ರೈತರು ಹಾಗೂ ಸ್ವಸಹಾಯ ಸಂಘಗಳು ಪ್ರದರ್ಶಿಸಲಿದ್ದಾರೆ. ಸುಮಾರು 100 ಮಳಿಗೆಗಳು ಇರುವ ಈ ಪ್ರದರ್ಶನದಲ್ಲಿ, ಕೃಷಿ, ತರಕಾರಿ ಮತ್ತು ಹೂವಿನ ಬೀಜಗಳ ಮಾರಾಟವಾಗಲಿದೆ.

ಸಮಯ: ಬೆಳಗ್ಗೆ 9 ರಿಂದ ರಾತ್ರಿ 9 ರ ವರೆಗೆ.

ಪ್ರವೇಶ ಶುಲ್ಕ : ₹30 ವಯಸ್ಕರಿಗೆ ಮತ್ತು ₹20 ಮಕ್ಕಳಿಗೆ.

ಮನೋರಂಜನೆ