ಷೇರು ಮಾರುಕಟ್ಟೆ ನಕಲಿ ಲಿಂಕ್‌; ಲಕ್ಷಾಂತರ ರೂಪಾಯಿ ವಂಚನೆ

ಷೇರು ಮಾರುಕಟ್ಟೆ ನಕಲಿ ಲಿಂಕ್‌; ಲಕ್ಷಾಂತರ ರೂಪಾಯಿ ವಂಚನೆ

ಉಡುಪಿ: ಷೇರು ಮಾರುಕಟ್ಟೆ ಗೂಗಲ್‌ ಲಿಂಕ್‌ ಬಳಸಿ, ಷೇರು ಹೂಡಿಕೆ ಮಾಡಿ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾರೆ.

ಪ್ರಜ್ವಲ್‌ (29) ಅವರು ಟ್ರೇಡಿಂಗ್‌ ಬಗ್ಗೆ ಗೂಗಲ್‌ನಲ್ಲಿ ಹುಡುಕುತ್ತಿರುವಾಗ //heyusdt.com ಎಂಬ ಲಿಂಕ್‌ನಲ್ಲಿ ಷೇರು ಮಾರುಕಟ್ಟೆಯ ಬಗ್ಗೆ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ಲಭಿಸಿತು. ಅದರಲ್ಲಿ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ, ಹಣ ಹೂಡಿಕೆ ಮಾಡಲು ತಿಳಿಸಿದ್ದು, ಇದನ್ನು ನಂಬಿ ಅಪರಿಚಿತರು ಸೂಚಿಸಿದ ವಿವಿಧ ಯುಪಿಐ ಐಡಿಗಳಿಗೆ ಹಾಗೂ ಬ್ಯಾಂಕ್‌ ಖಾತೆಗಳಿಗೆ ಹಂತ ಹಂತವಾಗಿ 3,17,015 ರೂ. ಹೂಡಿಕೆ ಮಾಡಿದ್ದು ತದನಂತರದಲ್ಲಿ ಹೂಡಿಕೆ ಮಾಡಿದ ಹಣ ಹಾಗೂ ಲಾಭಾಂಶ ನೀಡದೇ ಮೋಸ ಮಾಡಿದ್ದಾರೆ ಎಂದು ಸೆನ್‌ ಅಪರಾಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

ರಾಜ್ಯ