
ಮಲ್ಪೆ ಗಾಂಧಿ ಶತಾಬ್ದ ಶಾಲಾ ಮೈದಾನದಲ್ಲಿ ಪಾರ್ಕ್ ಮಾಡಿದ್ದ ಕಾರಿನ ಗಾಜು ಒಡೆದು ಬ್ಯಾಗಿನ ಒಳಗಿದ್ದ ನಗದು ಮತ್ತು ಮೊಬೈಲನ್ನು ಕಳ್ಳರು ಎಗರಿಸಿದ ಘಟನೆ ಜ. 14ರಂದು ನಡೆದಿದೆ.
ಮಂಗಳವಾರ ರಾತ್ರಿ 7.15ರ ವೇಳೆಗೆ ಉಡುಪಿ ಕುಕ್ಕಿಕಟ್ಟೆಯ ರುಖೀಯಾ ಅವರು ತಮ್ಮ ಕುಟುಂಬದೊಂದಿಗೆ ಮಲ್ಪೆ ಬೀಚ್‌ಗೆ ಬಂದಿದ್ದರು. ಮಲ್ಪೆ ಗಾಂಧಿ ಶತಾಬ್ದ ಮೈದಾನದಲ್ಲಿ ತಮ್ಮ ಕಾರಿಗೆ ಲಾಕ್ ಮಾಡಿ ಪಾರ್ಕ್ ಮಾಡಿದ್ದರು.
ರಾತ್ರಿ 8.30ಕ್ಕೆ ವಾಪಸು ಬಂದಾಗ ಕಾರಿನ ಗಾಜನ್ನು ಒಡೆದು ಬ್ಯಾಗಿನೊಳಗಿದ್ದ 20 ಸಾವಿರ ನಗದು, ಮೊಬೈಲ್, ಎಟಿಎಂ ಕಾರ್ಡ್ ಅನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

