
ಟೋಕಿಯೋ: ನೈಋತ್ಯ ಜಪಾನ್‌ನ ಕ್ಯುಶು ಪ್ರದೇಶದಲ್ಲಿ ಸೋಮವಾರ ರಿಕ್ಟರ್ ಮಾಪಕದಲ್ಲಿ 6.9 ಅಳತೆಯ ಭೂಕಂಪ ಸಂಭವಿಸಿದೆ. ಮಿಯಾಝಾಕಿ ಮತ್ತು ಕೊಚಿ ಪ್ರಾಂತ್ಯಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಜಪಾನ್ ನ ಹವಾಮಾನ ಸಂಸ್ಥೆಯನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ಭೂಕಂಪ ಸಂಭವಿಸಿದ ಕುರಿತು ವರದಿ ಮಾಡಿದೆ. ಮಿಯಾಝಾಕಿ ಪ್ರಿಫೆಕ್ಚರ್‌ನಲ್ಲಿ ರಾತ್ರಿ ಜಪಾನ್ ಕಲಾಮಾನ 9:29 ಕ್ಕೆ ಭೂಕಂಪ ಸಂಭವಿಸಿದೆ. ಜಪಾನಿನ ಮಾಪಕದಲ್ಲಿ 0 ರಿಂದ 7 ರಷ್ಟಿರುವ ತೀವ್ರ ಪೀಡಿತ ಪ್ರದೇಶಗಳಲ್ಲಿ 5 ಕ್ಕಿಂತ ಕಡಿಮೆ ತೀವ್ರತೆಯನ್ನು ಹೊಂದಿದೆ ಎಂದು NHK ವರದಿ ಮಾಡಿದೆ. EMSC(ಯುರೋಪಿಯನ್ ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್) ಪ್ರಕಾರ ಭೂಕಂಪ 37 ಕಿಮೀ ಆಳದಲ್ಲಿದೆ.ಕಳೆದ ವರ್ಷ ಆಗಸ್ಟ್ 8 ರಂದು, 6.9 ಮತ್ತು 7.1 ರ ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಕ್ಯುಶು ಮತ್ತು ಶಿಕೋಕು ನೈಋತ್ಯ ದ್ವೀಪಗಳನ್ನು ನಡುಗಿಸಿದ್ದವು. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.
