
ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದಲ್ಲಿ ಸೋಮವಾರ ಎರಡು ಕಳವು ಪ್ರಕರಣ ನಡೆದಿದೆ. ಮಹಿಳೆಯ ಬ್ಯಾಗ್‌ನಿಂದ 15 ಪವನ್ ಚಿನ್ನಾಭರಣ ಮತ್ತು ಇನ್ನೋರ್ವ ಮಹಿಳೆಯಿಂದ ₹ 25 ಸಾವಿರ ಕಳವಾಗಿದ್ದು, ಚಿನ್ನಾಭರಣ ಕಳೆದುಕೊಂಡಿರುವ ಮಹಿಳೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕಡಬ ಸಮೀಪದ ಮರ್ದಾಳ ನೆಕ್ಕಿತ್ತಡ್ಕ ನಿವಾಸಿ ಹಬೀಬ ಎಂಬುವರು ಪೆರ್ನೆಯಿಂದ ಬಸ್‌ನಲ್ಲಿ ಬಂದು ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಅವರ ಬ್ಯಾಗ್‌ನಿಂದ ಕಳವು ಮಾಡಲಾಗಿದೆ.
ಕೋಡಿಂಬಾಡಿ ದಾರಂದಕುಕ್ಕು ನಿವಾಸಿ ಝಾಹಿದಾ ಉಪ್ಪಿನಂಗಡಿ ಹಳೆಯ ಬಸ್‌ನಿಲ್ದಾಣದ ಬಳಿಯ ಕ್ಲಿನಿಕ್‌ನಲ್ಲಿ ವೈದ್ಯರನ್ನು ಭೇಟಿ ಮಾಡಿ ಮನೆಗೆ ಬಸ್‌ನಲ್ಲಿ ಮನೆಗೆ ತೆರಳುವಾಗ ದಾರಂದಕುಕ್ಕು ತಲುಪುವ ವೇಳೆ ₹ 25 ಸಾವಿರ ಕಳವಾಗಿ ಎಂದು ತಿಳಿಸಿದ್ದಾರೆ.
ಬಸ್ ನಿಲ್ದಾಣದಲ್ಲಿ ಈ ರೀತಿಯ ಕಳವು ಪ್ರಕರಣ ನಡೆಯುತ್ತಿದ್ದು, ಪೊಲೀಸರಿಗೆ ದೂರಿ ನೀಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
