
ಮಂಗಳೂರು: ಡ್ರಗ್ಸ್ ಸೇವನೆ ಮಾಡಿದ ಆರೋಪದಲ್ಲಿ ಕೇರಳ ಮೂಲದ ಅಲ್ಬಿನ್ ಶಿಬು(19)ನನ್ನು ಉರ್ವ ಪೊಲೀಸರು ಬಿಜೈ ಕಾಪಿಕಾಡ್ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ.

ಸಾರ್ವಜನಿಕ ರಸ್ತೆ ಬದಿಯಲ್ಲಿ ಸಿಗರೆಟ್ ಸೇದುತ್ತಾ ನಿಂತಿದ್ದವನನ್ನು ವಿಚಾರಿಸಿದಾಗ ಆತ ತೊದಲುತ್ತಿದ್ದ. ಬಾಯಿಯಿಂದ ಮಾದಕ ವಸ್ತು ಸೇವನೆ ಮಾಡಿದ ಘಾಟು ವಾಸನೆ ಬರುತ್ತಿತ್ತು. ಅನುಮಾನಗೊಂಡ ಪೊಲೀಸರು ಆತನನ್ನು ಕೂಲಂಕಷವಾಗಿ ವಿಚಾರಿಸಿದಾಗ ಈತ ಮಾದಕ ವಸ್ತು ಸಿಗರೆಟಿನೊಳಗೆ ತುಂಬಿಸಿ ಸೇದಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.
