ಅಕ್ರಮ ಗೋ ಸಾಗಾಟ ಪತ್ತೆ; ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

ಅಕ್ರಮ ಗೋ ಸಾಗಾಟ ಪತ್ತೆ; ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

ಸುರತ್ಕಲ್‌: ಹಿಂದೂ ಸಂಘಟನೆಗಳು ನೀಡಿದ ಮಾಹಿತಿಯನ್ನು ಆಧರಿಸಿ ಸೋಮವಾರ ರಾತ್ರಿ ಸುರತ್ಕಲ್‌ನಲ್ಲಿ ಪಿಕಪ್‌ ಅನ್ನು ಸುರತ್ಕಲ್‌ ಠಾಣೆಯ ಪೊಲೀಸರು ಅಡ್ಡಗಟ್ಟಿ ತಪಾಸಣೆ ನಡೆಸಿದಾಗ ಕಸಾಯಿಖಾನೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂರು ಹೋರಿಗಳು ಪತ್ತೆಯಾಗಿದೆ.

ವಾಹನದಲ್ಲಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರು ಕಡೆಯಿಂದ ಮೂಲ್ಕಿ ಕೆರೆಕಾಡು ಕಡೆಗೆ ಕೊಂಡೊಯ್ಯುತ್ತಿದ್ದುದಾಗಿ ಆರೋಪಿಗಳು ಮಾಹಿತಿ ನೀಡಿದ್ದಾರೆ. ಈ ಕುರಿತು ಸುರತ್ಕಲ್‌ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ರಾಜ್ಯ