ಮಂಗಳೂರು : ಕೊಕೇನ್ ಸೇವನೆ; ಮೂವರ ಬಂಧನ

ಮಂಗಳೂರು : ಕೊಕೇನ್ ಸೇವನೆ; ಮೂವರ ಬಂಧನ

ಮಂಗಳೂರು: ಡ್ರಗ್ಸ್‌ ಕೊಕೇನ್‌ ಮತ್ತು ಚರಸ್‌ ಸೇವನೆ ಮಾಡಿದ ಮೂವರು ಯುವಕರನ್ನು ರವಿವಾರದಂದು ಪೊಲೀಸರು ಬಂಧಿಸಿದ್ದಾರೆ.

ಬಿಜೈ ಕಾಪಿಕಾಡ್‌ ಕುಂಟಿಕಾನದಲ್ಲಿ ಕಾಪಿಕಾಡ್‌ನ‌ ಕುರುಂಬಯ್ಯ(29)ನನ್ನು ಉರ್ವ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈತ ಕೊಕೇನ್‌ ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ದೃಢಪಟ್ಟಿದೆ. ಇನ್ನೊಂದು ಪ್ರಕರಣದಲ್ಲಿ ದಕ್ಷಿಣ ಠಾಣೆಯ ಪೊಲೀಸರು ಅತ್ತಾವರ ಕಟ್ಟೆ ಬಳಿ ಕೊಂಚಾಡಿಯ ಶುಭಂ(24) ಮತ್ತು ಬೋಳೂರಿನ ರೋಶನ್‌ ಪಿ.ಎಸ್‌(22)ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪಿಗಳು ಗೋವಾದಿಂದ ಗೋವಾದಿಂದ ಕೊಕೇನ್‌ ಮತ್ತು ಚರಸ್‌ ಖರೀದಿಸಿ ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

ರಾಜ್ಯ