ಮಂಗಳೂರು-ಪುಣೆ ನಡುವೆ ನೇರ ವಿಮಾನ ಆರಂಭ

ಮಂಗಳೂರು-ಪುಣೆ ನಡುವೆ ನೇರ ವಿಮಾನ ಆರಂಭ

ಮಂಗಳೂರು: ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಮಂಗಳೂರು ಹಾಗೂ ಮಹಾರಾಷ್ಟ್ರದ ಐಟಿ ರಾಜಧಾನಿ ಪುಣೆ ಮಧ್ಯೆ ಶನಿವಾರದಿಂದ ನೇರ ವಿಮಾನ ಸೇವೆ ಆರಂಭಿಸಿದೆ.

ಉದ್ಘಾಟನ ವಿಮಾನವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 8ಕ್ಕೆ ಹೊರಟು 9.25ಕ್ಕೆ ಪುಣೆ ತಲಪಿತು. ಪುಣೆಯಿಂದ 9.55ಕ್ಕೆ ಹೊರಟು ಮಂಗಳೂರಿಗೆ 11.45ಕ್ಕೆ ಆಗಮಿಸಿತು.ಕೇವಲ ಬೆಳಗ್ಗಿನ ಸೇವೆಯಷ್ಟೇ ಅಲ್ಲದೆ ಹೆಚ್ಚುತ್ತಿರುವ ಬೇಡಿಕೆ ಗಮನದಲ್ಲಿರಿಸಿ ಸಂಜೆಯ ಸೇವೆಗಳನ್ನೂ ಆರಂಭಿಸಲಾಗಿದೆ. ಸಂಜೆ 6.30ಕ್ಕೆ ಮಂಗಳೂರಿನಿಂದ ಹೊರಟು ರಾತ್ರಿ 8ಕ್ಕೆ ಪುಣೆಗೆ ಹಾಗೂ ಮರುಪ್ರಯಾಣದಲ್ಲಿ ಪುಣೆಯಿಂದ ರಾತ್ರಿ 8.35ಕ್ಕೆ ಹೊರಟು ರಾತ್ರಿ 10.05ಕ್ಕೆ ಮಂಗಳೂರಿಗೆ ತಲುಪಲಿದೆ.

ರಾಜ್ಯ