ಉಪ್ಪಿನಂಗಡಿ ಉಕ್ಕಿ  ಹರಿಯುತ್ತಿದ್ದ  ನೇತ್ರಾವತಿ ನ ನದಿಯಲ್ಲಿ  ‌ಕೊಚ್ಚಿಬಂದ  ದನ :ಜೀವ ಪಣಕ್ಕಿಟ್ಟು ರಕ್ಷಣೆ ಮಾಡಿದ ರಕ್ಷಣಾ ಪಡೆ:ಸಾರ್ವಜನಿಕರಿಂದ ಹರಿದು ಬಂದ ಪ್ರಶಂಸೆ.
ರಾಜ್ಯ

ಉಪ್ಪಿನಂಗಡಿ ಉಕ್ಕಿ  ಹರಿಯುತ್ತಿದ್ದ  ನೇತ್ರಾವತಿ ನ ನದಿಯಲ್ಲಿ  ‌ಕೊಚ್ಚಿಬಂದ  ದನ :ಜೀವ ಪಣಕ್ಕಿಟ್ಟು ರಕ್ಷಣೆ ಮಾಡಿದ ರಕ್ಷಣಾ ಪಡೆ:ಸಾರ್ವಜನಿಕರಿಂದ ಹರಿದು ಬಂದ ಪ್ರಶಂಸೆ.

  ಉಪ್ಪಿನಂಗಡಿ ಜು.26 : ತುಂಬಿದ ನೇತ್ರಾವತಿ ನದಿಯಲ್ಲಿ ತೇಲಿ ಬರುತ್ತಿದ್ದ ದನವೊಂದನ್ನು ಉಪ್ಪಿನಂಗಡಿಯಲ್ಲಿರುವ ಗೃಹರಕ್ಷಕದಳದವರನ್ನೊಳಗೊಂಡ ಪ್ರವಾಹ ರಕ್ಷಣಾ ತಂಡ ದೋಣಿಯ ಮೂಲಕ ನದಿ ಮಧ್ಯಕ್ಕೆ ಹೋಗಿ ರಕ್ಷಣೆ ಮಾಡಿ ದಡಕ್ಕೆ ಕರೆದುಕೊಂಡು ಬಂದ ಘಟನೆ ಉಪ್ಪಿನಂಗಡಿಯಲ್ಲಿ ಜು.26ರಂದು ನಡೆದಿದೆ. ನೇತ್ರಾವತಿ ನದಿಯ ನೀರಿನ ಮಟ್ಟ ಇಂದು ನಿನ್ನೆಗಿಂತಲೂ…

ಕೊಡಗು ಜಿಲ್ಲೆಯಾದ್ಯಂತ ವ್ಯಾಪಕವಾಗಿ ಸುರಿಯುತ್ತಿರುವ ಮಳೆ : ಶಾಲಾ ಕಾಲೇಜುಗಳಿಗೆ ನಾಳೆಯೂ (ಜು.27) ರಜೆ ಘೋಷಣೆ.
ರಾಜ್ಯ

ಕೊಡಗು ಜಿಲ್ಲೆಯಾದ್ಯಂತ ವ್ಯಾಪಕವಾಗಿ ಸುರಿಯುತ್ತಿರುವ ಮಳೆ : ಶಾಲಾ ಕಾಲೇಜುಗಳಿಗೆ ನಾಳೆಯೂ (ಜು.27) ರಜೆ ಘೋಷಣೆ.

​ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಾಗೂ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿರುವುದರಿಂದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಜುಲೈ 27 ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ

ಕೊಡಗು ಸಂಪಾಜೆ ಸುರಿಯುತ್ತಿರುವ ಭಾರೀ ಮಳೆ ಮನೆಯ ಗೋಡೆ ಕುಸಿತ – ವ್ಯಾಪಕ ಹಾನಿ
ರಾಜ್ಯ

ಕೊಡಗು ಸಂಪಾಜೆ ಸುರಿಯುತ್ತಿರುವ ಭಾರೀ ಮಳೆ ಮನೆಯ ಗೋಡೆ ಕುಸಿತ – ವ್ಯಾಪಕ ಹಾನಿ

ಸಂಪಾಜೆ ಗ್ರಾಮದದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮನೆಯ ಗೋಡೆ ಕುಸಿದು ಮನೆಗೆ ವ್ಯಾಪಕ ಹಾನಿಯಾದ ಘಟನೆ   ಜು.26ರಂದು ವರದಿಯಾಗಿದೆ. ಕೊಯನಾಡು  ಸುಲೈಕ ಎಂಬವರ ಮನೆಯ ಗೋಡೆ ಮಳೆಯಿಂದಾಗಿ ಕುಸಿದು ಬಿದ್ದಿದ್ದು, ಮನೆಗೆ ಸಂಪೂರ್ಣ ಹಾನಿ ಸಂಭವಿಸಿದೆ ಸ್ಥಳಕ್ಕೆ ವಿವಿದ  ಇಲಾಖೆಯ ಅಧಿಕಾರಿಗಳು, ಗ್ರಾಮ ಪಂ ಅದ್ಯಕ್ಷರು, ಸದಸ್ಯರು…

ಬಂಟ್ವಾಳ: ಅಕ್ರಮ ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ, ಆರು ಮಂದಿ ವಶಕ್ಕೆ, ಓರ್ವ ಪರಾರಿ 
ರಾಜ್ಯ

ಬಂಟ್ವಾಳ: ಅಕ್ರಮ ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ, ಆರು ಮಂದಿ ವಶಕ್ಕೆ, ಓರ್ವ ಪರಾರಿ 

ಬಂಟ್ವಾಳ ತಾಲೂಕಿನ ಪಿಲಿಮೊಗ್ರು ಗ್ರಾಮದ ನಡಾಯಿ ಎಂಬಲ್ಲಿ ಅಕ್ರಮವಾಗಿ ಜುಗಾರಿ ಆಟ ನಡೆಯುತ್ತಿದ್ದ ಸ್ಥಳಕ್ಕೆ ಬುಧವಾರ ರಾತ್ರಿ ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದು, ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು ಓರ್ವ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಗಳನ್ನು ಶಿವರಾಮ ನಾಯಕ್‌ (56), ಸತೀಶ (43), ಅಶ್ರಫ್‌ (47), ಸುರೇಶ…

*ಪುತ್ತೂರಿನ ಸಂಜೀವ ಶೆಟ್ಟಿ ಜವುಳಿ ಮಳಿಗೆಯಲ್ಲಿ ಆಷಾಡ ಮಾಸದ ಭಾರೀ ರಿಯಾಯಿತಿ ಮಾರಾಟ…!*
ರಾಜ್ಯ

*ಪುತ್ತೂರಿನ ಸಂಜೀವ ಶೆಟ್ಟಿ ಜವುಳಿ ಮಳಿಗೆಯಲ್ಲಿ ಆಷಾಡ ಮಾಸದ ಭಾರೀ ರಿಯಾಯಿತಿ ಮಾರಾಟ…!*

ಎಲ್ಲಾ ರೈತಾಪಿ ವರ್ಗಕ್ಕೆ , ಅಥವಾ ವೃತ್ತಿಪರರಿಗೆ ಆಷಾಡ ಮಾಸವೆಂದರೆ ಆರ್ಥಿಕವಾಗಿ ತುಸು ಕಷ್ಟದ ದಿನಗಳೇ... ಅಲ್ಲದೇ   ಆಷಾಡದಲ್ಲಿ ಅಷ್ಟಾಗಿ ಮಂಗಳಕಾರ್ಯವನ್ನು ಮಾಡುವುದಿಲ್ಲ ಹಾಗಾಗಿ ವ್ಯವಹಾರಿಕವಾಗಿಯೂ ಪ್ರತಿಯೊಬ್ಬರಲ್ಲೂ ಒಂದು ರೀತಿಯ ಆರ್ಥಿಕ ಅಭಾವ ಕಾಡುವುದು ಸಹಜ... ಆದ್ರೆ ಇಂತಹ ಅವಧಿಯಲ್ಲಿ ಅತ್ಯಂತ ಕಡಿಮೆ ಧರಕ್ಕೆ ಜವುಳಿಗಳನ್ನು ಖರೀದಿಸಬೇಕೆಂದರೆ…

ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿನಾಚರಣೆ.
ರಾಜ್ಯ

ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿನಾಚರಣೆ.

ಕೆವಿಜಿ ಅಮರಜ್ಯೋತಿಯಲ್ಲಿ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಮಾಡಲಾಯಿತು.ಕಾಲೇಜಿನ ಉಪನ್ಯಾಸಕಿಯಾದ ಶ್ರೀಮತಿ ಮಲ್ಲಿಕಾ ಎಂ ಎಲ್ ಮಾತನಾಡಿಕಾರ್ಗಿಲ್ ಯುದ್ಧದ ಇತಿಹಾಸ ಮತ್ತು ಅದರ ರೋಚಕತೆ ಹಾಗೂ ಭಾರತೀಯ ಯೋಧರ ಬಲಿದಾನದ ಬಗ್ಗೆ ವಿದ್ಯಾರ್ಥಿಗಳಿಗೆ ಸಂಕ್ಷಿಪ್ತವಾಗಿ ವಿವರಿಸಿದರು.ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಖಾಲಿದ ನೂಹ, ಕ್ಯಾಪ್ಟನ್…

ಕೊಡಗು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ (ಜು.26) ರಜೆ ಘೋಷಣೆ.
ರಾಜ್ಯ

ಕೊಡಗು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ (ಜು.26) ರಜೆ ಘೋಷಣೆ.

​ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಾಗೂ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿರುವುದರಿಂದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಜುಲೈ 26 ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.

ವಿದ್ಯುತ್ ಗುತ್ತಿಗೆದಾರ ಮನವಿಗೆ ಸ್ಪಂದಿಸಿದ  ಪುತ್ತೂರು  ಶಾಸಕ ಅಶೋಕ್ ಕುಮಾರ್ ರೈ:ಬ್ರೇಕ್ ಡೌನ್ ಕಾಮಗಾರಿಗಳ ಭತ್ಯೆ ಹೆಚ್ಚಿಸಲು ಇಂಧನ  ಸಚಿವರಿಗೆ ಮನವಿ
ರಾಜ್ಯ

ವಿದ್ಯುತ್ ಗುತ್ತಿಗೆದಾರ ಮನವಿಗೆ ಸ್ಪಂದಿಸಿದ  ಪುತ್ತೂರು  ಶಾಸಕ ಅಶೋಕ್ ಕುಮಾರ್ ರೈ:ಬ್ರೇಕ್ ಡೌನ್ ಕಾಮಗಾರಿಗಳ ಭತ್ಯೆ ಹೆಚ್ಚಿಸಲು ಇಂಧನ  ಸಚಿವರಿಗೆ ಮನವಿ

: ವಿದ್ಯುತ್ ಗುತ್ತಿಗೆದಾರರು ನಿರ್ವಹಿಸುವ ತುರ್ತು ಸೇವೆಗಳಲ್ಲಿ ಒಂದಾದ ಬ್ರೇಕ್ ಡೌನ್ ಕಾಮಗಾರಿಗಳನ್ನು ತ್ವರಿತ ರೀತಿಯಲ್ಲಿ ವಿದ್ಯುತ್ ಇಲಾಖೆ ಹಾಗೂ ವಿದ್ಯುತ್ ಗುತ್ತಿಗೆದಾರರು ಜೊತೆಗೂಡಿ ಗ್ರಾಹಕರಿಗೆ ತೊಂದರೆಯಾಗದಂತೆ ಕಾಮಗಾರಿಯನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇವರಿಗೆ ಭತ್ಯೆ ನೀಡುವಂತೆ ಇಂಧನ‌ಸಚಿವ ಕೆ‌ಜೆ ಜಾರ್ಜ್ ಅವರಿಗೆ ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ.…

ದ.ಕ. ಜಿಲ್ಲೆಯ ಅಡಿಕೆ ಬೆಳೆಗಾರರ ದುಖಃಕ್ಕೆ ಧ್ವನಿಯಾದ ಬ್ರಿಜೇಶ್ ಚೌಟ. : ಹಳದಿ ಎಲೆ ರೋಗ ಅನುಭವಿಸುತ್ತಿರುವ ನಷ್ಟದ ಕುರಿತು ಲೋಕಸಭೆಯಲ್ಲಿ ಗಮನ ಸೆಳೆದ ಸಂಸದ
ರಾಜ್ಯ

ದ.ಕ. ಜಿಲ್ಲೆಯ ಅಡಿಕೆ ಬೆಳೆಗಾರರ ದುಖಃಕ್ಕೆ ಧ್ವನಿಯಾದ ಬ್ರಿಜೇಶ್ ಚೌಟ. : ಹಳದಿ ಎಲೆ ರೋಗ ಅನುಭವಿಸುತ್ತಿರುವ ನಷ್ಟದ ಕುರಿತು ಲೋಕಸಭೆಯಲ್ಲಿ ಗಮನ ಸೆಳೆದ ಸಂಸದ

ನವದೆಹಲಿ :   ಹಳದಿ ಎಲೆ ರೋಗ ಸಮಸ್ಯೆ ಬಗ್ಗೆ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಕೆ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟವನ್ನು ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಲೋಕಸಭೆ ಗಮನಸೆಳೆದಿದ್ದಾರೆ. ಒಂದೇ ಹಂತದಲ್ಲಿ ಪರಿಹಾರ ನೀಡುವ ಮೂಲಕ ಬಿಕ್ಕಟ್ಟನ್ನು ಬಗೆಹರಿಸಲು ಮುಂದಾಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ…

ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಸಂಶೋಧನಾ ವಿದ್ಯಾರ್ಥಿ ವಿಕ್ರಂ ಕೆ.ವಿ. ಅವರಿಗೆ ಡಾಕ್ಟರೇಟ್ ಪದವಿ
ರಾಜ್ಯ

ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಸಂಶೋಧನಾ ವಿದ್ಯಾರ್ಥಿ ವಿಕ್ರಂ ಕೆ.ವಿ. ಅವರಿಗೆ ಡಾಕ್ಟರೇಟ್ ಪದವಿ

ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನ ಸಂಶೋಧನಾ ವಿದ್ಯಾರ್ಥಿ ವಿಕ್ರಂ ಕೆ.ವಿ. ಇವರ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರು ಪ್ರೊಫೆಸರ್ ಡಾ. ಉಮಾಶಂಕರ್ ಕೆ.ಎಸ್. ವಿಭಾಗ ಮುಖ್ಯಸ್ಥರು, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಇವರ ಮಾರ್ಗದರ್ಶನದಲ್ಲಿ “Study on Optimization…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI