ಶಿರೂರು ಗುಡ್ಡಕುಸಿತ ದುರಂತ – ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಿದ ಜಿಲ್ಲಾಡಳಿತ.
ಕಾರವಾರ ಜುಲೈ 28: ಶಿರೂರು ರಾಷ್ಟ್ರೀಯ ಹೆದ್ದಾರಿ ಬಳಿ ಉಂಟಾದ ಗುಡ್ಡಕುಸಿತದಿಂದ ನಾಪತ್ತೆಯಾಗಿರುವವರಿಗಾಗಿ ನಡೆಸುತ್ತಿರುವ ಕಾರ್ಯಾಚರಣೆಯನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಲು ನಿರ್ಧರಿಸಿದೆ. ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾಗಿರುವ ಮೂವರು ಇನ್ನು ಸಿಕ್ಕಿಲ್ಲ. ಎಸ್ಡಿಆರ್ಎಫ್, ಎನ್ಡಿಆರ್ಎಫ್, ಡ್ರೋಣ್, ಹೆಲಿಕಾಪ್ಟರ್, ಮುಳುಗು ತಜ್ಞರು ಸೇರಿ ಹಲವರು…










