ಕುಮಾರಧಾರ ನದಿಯಲ್ಲಿ ಸತ್ತು ತೇಲುತ್ತಿರುವ ಮೊಸಳೆ:ಕಲುಷಿತಗೊಂಡ ನದಿ ನೀರೇ ಜಲಚರಗಳ ಸಾವಿಗೆ ಕಾರಣ ಶಂಕೆ.
ಕುಮಾರಧಾರ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಜಲಚರಗಳು ತೀವ್ರ ತೊಂದರೆ ಅನುಭವಿಸುತ್ತಿವೆ. ಇದೀಗ ಕೋಡಿಂಬಾಳ ಗ್ರಾಮದ ಪುಳಿಕುಕ್ಕು ಸೇತುವೆ ಅಡಿಯಲ್ಲಿ ಮೊಸಳೆಯೊಂದು ಸತ್ತು ಬಿದ್ದಿರುವ ಘಟನೆ ವರದಿಯಾಗಿದೆ. ಈ ಸೇತುವೆ ಅಡಿ ಭಾಗದಲ್ಲಿ ಕುಮಾರಧಾರ ನದಿ ಹರಿಯುತ್ತಿದ್ದು ನೀರು ಕಲುಷಿತಗೊಂಡು ಜಲಚರಗಳು ಸಹಿತ ಮೊಸಳೆ ಸತ್ತು ಹೋಗಿದೆ ಎನ್ನಲಾಗುತ್ತಿದೆ.…










