ಮಾಣಿ : ಬೈಕ್ ಗೆ ಲಾರಿ ಡಿಕ್ಕಿ ಬಾಲಕ ಸಾವು

ಮಾಣಿ : ಬೈಕ್ ಗೆ ಲಾರಿ ಡಿಕ್ಕಿ ಬಾಲಕ ಸಾವು

ಈಚರ್ ಲಾರಿ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ 6 ವರ್ಷದ ಬಾಲಕನೊಬ್ಬ ಸಾವನಪ್ಪಿದ ಘಟವೆ ಶನಿವಾರ ಸಂಜಡೆ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಸಂಭವಿಸಿದೆ.

ಮೃತ ಮಗುವನ್ನು ಬೆಳ್ತಂಗಡಿ ತಾಲೂಕಿನ ನಾವೂರು ಸಮೀಪದ ಮುರ ನಿವಾಸಿ ಅಬ್ದುಲ್ ಸಲೀಂ ಅವರ ಹಿರಿಯ ಪುತ್ರ ಶಾಝಿನ್ (6) ಎಂದು ಗುರುತಿಸಲಾಗಿದೆ. ಸಲೀಂ ಅವರು ತನ್ನ ಪತ್ನಿ- ಮಕ್ಕಳೊಂದಿಗೆ ಬೈಕಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಗಡಿಯಾರ ಎಂಬಲ್ಲಿ ಈಚರ್ ಲಾರಿ ಡಿಕ್ಕಿ ಹೊಡೆದಿದೆ. ಮಗು ಶಾಝಿನ್ ಸ್ಥಳದಲ್ಲೇ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಗಾಯಗೊಂಡ ಅಬ್ದುಲ್ ಸಲೀಂ, ಅವರ ಪತ್ನಿ ಹಾಗೂ ಇನ್ನಿಬ್ಬರು ಮಕ್ಕಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯ