
ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದುಕೊಂಡಿದ್ದ ಬೆಲೆ ಬಾಳುವ ವಸ್ತುಗಳಿದ್ದ ಬ್ಯಾಗ್ ನ್ನು ಮರಳಿ ಪಡೆದಿದ್ದಾರೆ. ಬ್ಯಾಗ್ ನಲ್ಲಿ 20 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಮತ್ತು 1 ಲಕ್ಷ ರೂಪಾಯಿ ನಗದು ಇತ್ತು ಎಂದು ತಿಳಿದುಬಂದಿದೆ.

ಆಗಮನ ಪ್ರದೇಶದ ನೆಲಮಹಡಿಯಲ್ಲಿರುವ ಆಹಾರ ಮತ್ತು ಪಾನೀಯ ಮಳಿಗೆಯಲ್ಲಿ ಅಜಾಗರೂಕತೆಯಿಂದ ಬಿಟ್ಟು ಹೋಗಿದ್ದ ಬ್ಯಾಗ್ ನ್ನು ಕಂಡ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ತ್ವರಿತವಾಗಿ ಅದನ್ನು ತೆಗೆದಿರಿಸಿದ್ದರು.
ಗಮನಿಸದ ಬ್ಯಾಗ್ ನ್ನು ಪತ್ತೆಹಚ್ಚಿದ ನಂತರ, ತಂಡ ಮುಂದಿನ ಕ್ರಮಕ್ಕಾಗಿ ಟರ್ಮಿನಲ್ ವ್ಯವಸ್ಥಾಪಕರ ಕಚೇರಿಗೆ ಅದನ್ನು ವರ್ಗಾವಣೆ ಮಾಡಿತ್ತು. ಇದಷ್ಟೇ ಅಲ್ಲದೇ ತಂಡ ಅದರ ಮಾಲೀಕರೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಬ್ಯಾಗ್‌ನೊಳಗೆ ಕಂಡುಬಂದ ಮೊಬೈಲ್ ಫೋನ್‌ನಲ್ಲಿ ಕರೆಗಾಗಿ ಕಾಯುತ್ತಿತ್ತು. ಒಮ್ಮೆ ಬ್ಯಾಗ್ ನ ಮಾಲಿಕ ಸಂಪರ್ಕಿಸಿದಾಗ, ಈಗಾಗಲೇ ಉಡುಪಿಗೆ ಸುಮಾರು 50 ಕಿಲೋಮೀಟರ್ ಪ್ರಯಾಣಿಸಿದ ಪ್ರಯಾಣಿಕನಿಗೆ ಆತನ ವಸ್ತುಗಳ ಸುರಕ್ಷತೆಯ ಬಗ್ಗೆ ಭರವಸೆ ನೀಡಲಾಯಿತು.
