ಭಾರತ – ಚೀನಾ ದೇಶಗಳ ಪ್ರತಿನಿಧಿಗಳ ಸಭೆ; ಗಡಿ ವಿವಾದ ಪರಿಹಾರ ಮತ್ತು ಆರ್ಥಿಕ ಸಹಕಾರವನ್ನು ಪ್ರೋತ್ಸಾಹಿಸುವ ಒಪ್ಪಂದಕ್ಕೆ ಸಹಿ

ಭಾರತ – ಚೀನಾ ದೇಶಗಳ ಪ್ರತಿನಿಧಿಗಳ ಸಭೆ; ಗಡಿ ವಿವಾದ ಪರಿಹಾರ ಮತ್ತು ಆರ್ಥಿಕ ಸಹಕಾರವನ್ನು ಪ್ರೋತ್ಸಾಹಿಸುವ ಒಪ್ಪಂದಕ್ಕೆ ಸಹಿ

ಡಿಸೆಂಬರ್ 18, 2024 ರಂದು ಚೀನಾದ ಬೀಜಿಂಗ್‌ನಲ್ಲಿ ಭಾರತ ಹಾಗೂ ಚೀನಾ ದೇಶದ ವಿಶೇಷ ಪ್ರತಿನಿಧಿಗಳ ನಡುವೆ 23ನೇ ಸುತ್ತಿನ ಮಾತುಕತೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾರತದ ಪ್ರತಿನಿಧಿಯಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಮತ್ತು ಚೀನಾ ದೇಶದ ಪ್ರತಿನಿಧಿಯಾಗಿ ಅಲ್ಲಿನ ವಿದೇಶಾಂಗ ಸಚಿವ ವಾಂಗ್ ಯಿ ಪಾಲ್ಗೊಂಡಿದ್ದರು. ವಿಶೇಷ ಪ್ರತಿನಿಧಿಗಳ ನಡುವೆ ನಡೆದ ಈ ಮಾತುಕತೆಯಲ್ಲಿ, ಭಾರತ ಮತ್ತು ಚೀನಾದ ಪ್ರತಿನಿಧಿಗಳು ಗಡಿಭಾಗದಲ್ಲಿ ಶಾಂತಿ ಮತ್ತು ಶಿಸ್ತು ಸ್ಥಾಪನೆ ಸಂಬಂಧಿತ ಕ್ರಮಗಳ ಬಗ್ಗೆ ಚರ್ಚಿಸಿದರು. ಗಡಿ ವಿವಾದಗಳ ನಿವಾರಣೆ ಮತ್ತು ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಗೆ ಒತ್ತು ನೀಡಲಾಯಿತು.

ಭಾರತ ಮತ್ತು ಚೀನಾ ದೇಶಗಳ ನಡುವಿನ ರಾಜತಾಂತ್ರಿಕ ಮಾತುಕತೆಯ ನಂತರ, ಮಾನ್ ಸರೋವರ್ ಯಾತ್ರೆ ಮತ್ತು ಗಡಿಯ ವ್ಯಾಪಾರವನ್ನು ಪುನರಾರಂಭಿಸುವ ಬಗ್ಗೆ ಪ್ರಮುಖ ಒಪ್ಪಂದಗಳಾಗಿವೆ. ಈ ಒಪ್ಪಂದಗಳು ಎರಡೂ ದೇಶಗಳ ನಡುವಿನ ಸಂಬಂಧಗಳ ಅಭಿವೃದ್ಧಿಗೆ ಪೂರಕವೆಂದು ಹೇಳಲಾಗಿದೆ.

ಭಾರತ ಚೀನಾ ಒಪ್ಪಂದದ  ಪ್ರಮುಖ ಅಂಶಗಳು:

  1. ಮಾನ್‌ ಸರೋವರ್ ಯಾತ್ರೆ ಪುನರಾರಂಭ: ಕೈಲಾಸದ ಮಾನ್ ಸರೋವರ್ ಯಾತ್ರೆಗೆ ಚೀನಾ ತನ್ನ ಅನುಮತಿಯನ್ನು ನವೀಕರಿಸಿದೆ. ಇದರಿಂದ ಮಾನ್ ಸರೋವರ್ ಯಾತ್ರೆ ಮಾಡಬೇಕೆಂದಿರುವ ಯಾತ್ರಾರ್ಥಿಗಳಿಗೆ ಬಹಳ ಸಂತಸವಾಗಿದೆ. ಅವರ ಬಹುಕಾಲದ ಆಸೆ ಈಡೇರಲಿದೆ.
  2. ಗಡಿಯ ವ್ಯಾಪಾರ: ಗಡಿಭಾಗದಲ್ಲಿ ವ್ಯಾಪಾರವನ್ನು ಮತ್ತೆ ಪ್ರಾರಂಭಿಸಲು ಚೀನಾ ಸಮ್ಮತಿಸಿದೆ. ಇದರಿಂದ ಅಲ್ಲಿನ ವ್ಯಾಪಾರಿಗಳಿಗೆ ಮತ್ತು ದೇಶದ ಆರ್ಥಿಕತೆಗೆ ಸಹಕಾರಿಯಾಗುತ್ತದೆ. ಈ ವ್ಯಾಪಾರದ ಮೂಲಕ ಆರ್ಥಿಕ ಚಟುವಟಿಕೆ ಪುನಃ ಚೇತರಿಸಿಕೊಳ್ಳಲಿದೆ.

ಈ ಒಪ್ಪಂದಗಳು ಉಭಯ ದೇಶಗಳ ನಡುವೆ ಶಾಂತಿ ಮತ್ತು ಸಹಕಾರವನ್ನು ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ. ಎರಡು ದೇಶಗಳ ನಡುವೆ ಉತ್ತಮ ಸಂಬಂಧಗಳ ಪುನಃಸ್ಥಾಪನೆಗೆ ವೇದಿಕೆಯಾಗಲಿದೆ.

ಅಂತರಾಷ್ಟ್ರೀಯ