ಇಂಟರ್‌ನೆಟ್ ಪ್ಯಾಕ್ ಹಾಕಿಸದ ತಾಯಿಯನ್ನು ಮಲಗಿದ್ದ ವೇಳೆ ಚಾಕುವಿನಿಂದ ಇರಿದ ಬಾಲಕ

ಇಂಟರ್‌ನೆಟ್ ಪ್ಯಾಕ್ ಹಾಕಿಸದ ತಾಯಿಯನ್ನು ಮಲಗಿದ್ದ ವೇಳೆ ಚಾಕುವಿನಿಂದ ಇರಿದ ಬಾಲಕ

ಕಾಸರಗೋಡು: ಕೋಝಿಕ್ಕೋಡ್‌ ಜಿಲ್ಲೆ, ತಿಕ್ಕೋಡಿಯಲ್ಲಿ ನಡೆದ ಘಟನೆ. ಮೊಬೈಲ್‌‌ನಲ್ಲಿ ಗೇಮ್ ಆಡುತ್ತಿದ್ದಾಗ, ಇಂಟರ್‌ನೆಟ್ ಮುಗಿದಿದ್ದು, ರೀಚಾರ್ಜ್ ಮಾಡುವುದಕ್ಕೆ ನಿರಾಕರಿಸಿದ ತಾಯಿಯನ್ನು 14 ವರ್ಷದ ಮಗ ಚೂರಿ ಇರಿದು ಕೊಲೆಗೈದಿದ್ದಾನೆ.

ಆನ್‌ಲೈನ್‌ ಗೇಮ್ ಗೀಳು ಬೆಳೆಸಿಕೊಂಡಿದ್ದ ಬಾಲಕ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದ. ರಾತ್ರಿ ವೇಳೆ ಗೇಮ್ ಆಡುತ್ತಿದ್ದಾಗ ಇಂಟರ್‌ನೆಟ್ ಖಾಲಿಯಾದ ಹಿನ್ನೆಲೆ, ರಿಚಾರ್ಚ್ ಮಾಡಬೇಕೆಂದು ತನ್ನ ತಾಯಿಯನ್ನು ಒತ್ತಾಯಿಸಿದ್ದಾನೆ. ತಾಯಿ ಅದನ್ನು ನಿರಾಕರಿಸಿದ್ದಾರೆ. ಪರಿಣಾಮವಾಗಿ ಉದ್ರಿಕ್ತನಾದ ಮಗ, ಮಲಗಿದ್ದ ವೇಳೆ ತಾಯಿಯನ್ನು ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಗಾಯಾಳುವನ್ನು ಹತ್ತಿರದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ