ಆರ್‌ಬಿಐ ಪ್ರಸ್ತುತ ಗವರ್ನರ್‌ ಶಕ್ತಿದಾಸ್ ಅಧಿಕಾರದ ಅವಧಿ ಇಂದಿಗೆ ಮುಕ್ತಾಯ

ಆರ್‌ಬಿಐ ಪ್ರಸ್ತುತ ಗವರ್ನರ್‌ ಶಕ್ತಿದಾಸ್ ಅಧಿಕಾರದ ಅವಧಿ ಇಂದಿಗೆ ಮುಕ್ತಾಯ

ಶ್ರೀ ಶಕ್ತಿಕಾಂತ್ ದಾಸ್ , 25 ನೇ ಗವರ್ನರ್, ಆರ್‌ಬಿಐ

ದೆಹಲಿ: ಆರ್‌ಬಿಐ ಪ್ರಸ್ತುತ ಗವರ್ನರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶಕ್ತಿಕಾಂತ್ ದಾಸ್ ಅವಧಿ ಇಂದಿಗೆ ಮುಕ್ತಾಯವಾಗಲಿದೆ. 25 ನೇ ಗವರ್ನರ್ ಆಗಿ ಸೇವೆ ಸಲ್ಲಿಸುತ್ತಿದ್ದ ಶಕ್ತಿಕಾಂತ್ ದಾಸ್ ಈ ಹಿಂದೆ ಹದಿನೈದನೇ ಹಣಕಾಸು ಆಯೋಗ ಮತ್ತು ಭಾರತದ ಶೆರ್ಪಾ ಜಿ 20 ರ ಸದಸ್ಯರಾಗಿದ್ದರು.

ಐಎಎಸ್ ಅಧಿಕಾರಿಯಾಗಿದ್ದಾಗ ದಾಸ್ ಅವರು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ, ಕಂದಾಯ ಕಾರ್ಯದರ್ಶಿ, ರಸಗೊಬ್ಬರಗಳ ಕಾರ್ಯದರ್ಶಿ ಸೇರಿದಂತೆ ಭಾರತ ಮತ್ತು ತಮಿಳುನಾಡು ಸರ್ಕಾರಗಳ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.

ಶ್ರೀಯುತ ಶಕ್ತಿಕಾಂತ್ ದಾಸ್ ದಾಸ್ ಅವರು 11 ಡಿಸೆಂಬರ್ 2018ರಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ನೇಮಕಗೊಂಡರು. ಶ್ರೀಯುತರು ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿದ ಲಂಡನ್ ಮೂಲದ ನಿಯತಕಾಲಿಕೆ ಸೆಂಟ್ರಲ್, ಬ್ಯಾಂಕರ್ ಆಫ್ ದಿ ಇಯರ್, ಏಷ್ಯಾ-ಪೆಸಿಫಿಕ್ 2020′ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಲಂಡನ್ ಮೂಲದ ಹಣಕಾಸು ಪತ್ರಿಕೆ ಸೆಂಟ್ರಲ್ ಬ್ಯಾಂಕಿಂಗ್‌ ಶಕ್ತಿಕಾಂತ ದಾಸ್ ಅವರಿಗೆ ‘ವರ್ಷದ ಗವರ್ನರ್ 2023’ ಎಂಬ ಬಿರುದನ್ನು ನೀಡಿ ಗೌರವಿಸಿದೆ.

ಸುದ್ಧಿಗೋಷ್ಠಿಯೊಂದರಲ್ಲಿ ಮಾತನಾಡುತ್ತಾ ದಾಸ್ ‌ಅವರು ದೇಶಸೇವೆಯನ್ನು ಸಲ್ಲಿಸುವುದಕ್ಕೆ ತನ್ನನ್ನು ಯೋಗ್ಯರೆಂದು ಪರಿಗಣಿಸಿ, ಅವಕಾಶವನ್ನು ಕಲ್ಪಿಸಿ, ಹೆಜ್ಜೆ ಹೆಜ್ಜೆಗೂ ತಮ್ಮ ಜೊತೆಗಿದ್ದ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿ ಅವರು ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸಿದ್ದಾರೆ. ತಮ್ಮ ಅವಧಿಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತಮಗೆ ಅವಕಾಶವನ್ನು ಕಲ್ಪಿಸಿಕೊಟ್ಟ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದ್ದಾರೆ.

26ನೇ ಗವರ್ನರ್ ಆಗಿ ನೇಮಕಗೊಂಡಿರುವ ಶ್ರೀಯುತ ಸಂಜಯ್ ಮಲ್ಹೋತ್ರಾರವರು ನಾಳೆಯಿಂದ ಅಧಿಕಾರ ಸ್ವೀಕರಿಸಲಿದ್ದಾರೆ.

ರಾಷ್ಟ್ರೀಯ