
ಉಳ್ಳಾಲ: ಆಸಿಡ್ ಸಾಗಿಸುತ್ತಿದ್ದ ಟ್ಯಾಂಕರ್ ನಲ್ಲಿ ಸೋರಿಕೆಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೆ.ಸಿ. ರೋಡ್ ಬಳಿ ನಡೆಯಿತು.

ಕಾರವಾರದಿಂದ ಕೊಚ್ಚಿಗೆ -ಹೈಡ್ರೋಕ್ಲೋರಿಕ್ ಆಸಿಡ್ ಸಾಗಿಸುತ್ತಿದ್ದ ಟ್ಯಾಂಕರ್ ನಲ್ಲಿ ಸೋರಿಕೆಯಾಗುತ್ತಿದ್ದು ಟ್ಯಾಂಕರನ್ನು ಕೆ.ಸಿ. ರೋಡ್ ಬಳಿಯ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿ ಸುರಕ್ಷತಾ ಕ್ರಮ ಕೈಗೊಳ್ಳಲಾಯಿತು. ಟ್ಯಾಂಕರ್ ನಲ್ಲಿ ಸೋರಿಕೆಯಾಗುತ್ತಿದ್ದ ಜಾಗದಲ್ಲಿ ಎಂಸೀಲ್ ಹಾಕಿ ಮುಚ್ಚಿದರೂ ಸೋರಿಕೆ ಮುಂದುವರೆದಿದೆ.
ಸ್ಥಳದಲ್ಲಿ ತಹಶೀಲ್ದಾರ್ ಪುಟ್ಟರಾಜು, ಅಗ್ನಿಶಾಮಕ ದಳ, ಸಂಚಾರಿ ಪೊಲೀಸರು ಮತ್ತು ಉಳ್ಳಾಲ ಪೊಲೀಸರು ಉಪಸ್ಥಿತರಿದ್ದು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.

