ಸುಳ್ಯ :ಬಾಂಜಿಕೋಡಿ ವಾರ್ಡಿನಲ್ಲಿ ಪ್ರತೀ ವರ್ಷ ಮಳೆಗಾಲದ ನೀರು ನಿಂತು ವಾಹನ ಸಂಚಾರಕ್ಕೆ ಹಾಗೂ ನಡೆದಾಡಲು ಕೂಡ ಕಷ್ಟವಾಗುತ್ತಿದ್ದ ಪ್ರದೇಶದಲ್ಲಿ ಇಲ್ಲಿನ ಊರವರು ಸೇರಿ ಇಂದು ಆ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ ಇದು ತಿಳಿದು ಬಂದಿದ್ದು,
ಇದರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದವರು ಒಟ್ಟಿಗೆ ಸೇರಿ ಊರ ಅಭಿವೃದ್ದಿಗಾಗಿ ಒಂದಾಗಿದ್ದು ವಿಶೇಷವಾಗಿ ಕಂಡು ಬಂದಿದೆ.
ಅದಲ್ಲದೇ ಇಲ್ಲಿ ಚುನಾವಣೆಯ ಸಮಯದಲ್ಲಿ ಹೊರತು ಪಡಿಸಿ ಉಳಿದ ಸಮಯದಲ್ಲಿ ಎಲ್ಲರೂ ಅಭಿವೃದ್ದಿಗಾಗಿ ಒಂದಾಗಿ ಸಹಬಾಳ್ವೆ ನಡೆಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದು ಊರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.




