
ದಿಲ್ಲಿಯ ಮುಖ್ಯಮಂತ್ರಿಗಳಾದ ಅತೀಶಿಯವರು, ತಾನು ವಿದ್ಯಾಭ್ಯಾಸ ಮಾಡಿದ ಸಂತ ಸ್ಟೀಫನ್ ಕಾಲೇಜಿನ ಸ್ಥಾಪಕರ ದಿನಾಚರಣೆಯನ್ನುದ್ದೇಶಿಸಿ ಮಾತನಾಡುತ್ತಾ, “ಸುಶಿಕ್ಷಿತ ಯುವಜನತೆ ರಾಜಕಾರಣದಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಆಗ ಮಾತ್ರ, ದೇಶದಲ್ಲಿ ಬದಲಾವಣೆಯನ್ನು ತರಬಹುದು. ದೇಶದ ಜನತೆಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ಮತ್ತು ರಕ್ಷಣೆಯನ್ನು ನೀಡಬಹುದು” ಎಂದು ಹೇಳಿದರು.

