ರೋಗಿಗೆ ಸಂಬಂಧ ಪಟ್ಟ ದಾಖಲೆ ಪತ್ರಗಳನ್ನು ನೀಡದ ಆಸ್ಪತ್ರೆಗೆ ಬಿಸಿ ಮುಟ್ಟಿಸಿದ ಗ್ರಾಹಕರ ನ್ಯಾಯಾಲಯ! ಗ್ರಾಹಕ ನ್ಯಾಯಾಲಯದ ಆದೇಶವನ್ನು ಪಾಲಿಸಲು ವಿಫಲವಾದರೆ, ಕ್ರಿಮಿನಲ್ ಮೊಕದ್ದಮೆ!
ಮಂಗಳೂರು: ರೋಗಿಗೆ ಸಂಬಂಧಪಟ್ಟ ದಾಖಲೆ ಹಸ್ತಾಂತರಿಸದ ಆಸ್ಪತ್ರೆಗೆ ನ್ಯಾಯಾಲಯ ದಂಡ ವಿಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ದಾಖಲೆ ಹಸ್ತಾಂತರಿಸದ ಆಸ್ಪತ್ರೆಯನ್ನುಯೂನಿಟಿ ಆಸ್ಪತ್ರೆ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಗೆ ಒಟ್ಟು 85,000 ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ. ಅನಾರೋಗ್ಯ ಪೀಡಿತರಾಗಿ ಮಂಗಳೂರಿನ ಫಳ್ನೀರ್ ಬಳಿ ಇರುವ ಯುನಿಟಿ ಆಸ್ಪತ್ರೆಗೆ ದಾಖಲಾಗಿದ್ದ…










